ವಿಜಯಪುರ: ಹಳ್ಳಿ ಫೈಟ್‌ಗೆ ಮೊದಲ ಹಂತದ ಅಖಾಡ ಅಂತಿಮಗೊಂಡಿದ್ದು, 250 ಜನ ಅವಿರೋಧ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯುವ ದಿನ (ಡಿ. 14) ದಂದು 1984 ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. 4997 ಅಭ್ಯರ್ಥಿಗಳು ಕಣದಲ್ಲಿ ಕಾಣಿಸಿಕೊಂಡಿದ್ದು, ಚಿಹ್ನೆ ಪಡೆದು ಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ಪ್ರತಿ ಗ್ರಾಮದಲ್ಲೂ ಪ್ರಚಾರದ ಕಾವು ಜೋರಾಗಿದ್ದು, ಹಳ್ಳಿ ಚಿತ್ರಣ ಸಂಪೂರ್ಣ ಚುನಾವಣೆಮಯವಾಗಿದೆ.
ಮೊದಲ ಹಂತದಲ್ಲಿ 8 ತಾಲೂಕಿನ 111 ಗ್ರಾಪಂಗಳಿಗೆ ಚುನಾವಣೆ ನಿಗದಿಯಾಗಿದೆ. ವಿಜಯಪುರ-17, ಬಬಲೇಶ್ವರ-15, ತಿಕೋಟಾ-14, ಬ.ಬಾಗೇವಾಡಿ-15, ನಿಡಗುಂದಿ-8, ಕೊಲ್ಹಾರ-8, ಮುದ್ದೇಬಿಹಾಳ-20 ಹಾಗೂ ತಾಳಿಕೋಟೆ-14 ಗ್ರಾಪಂಗಳಿಗೆ ಚುನಾವಣೆ ನಡೆಯುತ್ತಿದೆ.
ಚುನಾವಣೆ ನಡೆಯಬೇಕಿರುವ 2126 ಸ್ಥಾನಗಳ ಪೈಕಿ ಬಬಲೇಶ್ವರ ತಾಲೂಕಿನ 1 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. 250ಜನ ಅವಿರೋಧ ಆಯ್ಕೆಯಾಗಿದ್ದು, 1875 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಅನುಸೂಚಿತ ಜಾತಿಯಡಿ-1353 (ಸಾಮಾನ್ಯ-642, ಮಹಿಳೆ-711), ಅನುಸೂಚಿತ ಪಂಗಡ-188(ಸಾಮಾನ್ಯ-22, ಮಹಿಳೆ-166), ಹಿಂದುಳಿದ ವರ್ಗ ಅ-772 (ಸಾಮಾನ್ಯ-369, ಮಹಿಳೆ-403), ಹಿಂದುಳಿದ ವರ್ಗ-ಬ-166 (ಸಾಮಾನ್ಯ-75, ಮಹಿಳೆ-91), ಸಾಮಾನ್ಯ ವರ್ಗ-2518(ಸಾಮಾನ್ಯ-1537, ಮಹಿಳೆ-981) ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಒಟ್ಟು 2645 ಹಾಗೂ ಮಹಿಳಾ ಕ್ಷೇತ್ರದಿಂದ ಒಟ್ಟು 2352 ಜನ ಸೇರಿ ಒಟ್ಟು 4997 ಜನ ಕಣದಲ್ಲಿದ್ದಾರೆ.
ವಿಜಯಪುರ ತಾಲೂಕಿನ 17 ಗ್ರಾಪಂಗಳ 355 ಸ್ಥಾನಗಳ ಪೈಕಿ 12 ಅವಿರೋಧ ಆಯ್ಕೆಯಾಗಿದ್ದು 343 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 982 ಜನ ಕಣದಲ್ಲಿದ್ದಾರೆ.
ಬಬಲೇಶ್ವರ ತಾಲೂಕಿನ 15 ಗ್ರಾಪಂಗಳ 299 ಸ್ಥಾನಗಳ ಪೈಕಿ 33 ಅವಿರೋಧ ಆಯ್ಕೆಯಾಗಿದ್ದು, ಚುನಾವಣೆ ನಡೆಯಲಿರುವ 265 ಸ್ಥಾನಗಳಿಗೆ 318 ಜನ ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ 1 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದಿರುವುದು ಗಮನಾರ್ಹ.
ತಿಕೋಟಾ ತಾಲೂಕಿನ 14 ಗ್ರಾಪಂಗಳ 287 ಸ್ಥಾನಗಳ ಪೈಕಿ 44 ಅವಿರೋಧ ಆಯ್ಕೆಯಾಗಿದ್ದು ಚುನಾವಣೆ ನಡೆಯಬೇಕಿರುವ 243 ಸ್ಥಾನಗಳಿಗೆ 260 ಜನ ಸ್ಪರ್ಧಿಸುತ್ತಿದ್ದಾರೆ.
ಬ.ಬಾಗೇವಾಡಿ ತಾಲೂಕಿನ 15 ಗ್ರಾಪಂಗಳ 313 ಸ್ಥಾನಗಳ ಪೈಕಿ 56 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಚುನಾವಣೆ ನಡೆಯಬೇಕಿರುವ 257 ಸ್ಥಾನಗಳಿಗೆ 281ಜನ ಸ್ಪರ್ಧಿಸುತ್ತಿದ್ದಾರೆ.
ನಿಡಗುಂದಿ ತಾಲೂಕಿನ 8 ಗ್ರಾಪಂಗಳ 144 ಸ್ಥಾನಗಳ ಪೈಕಿ 17 ಅವಿರೋಧ ಆಯ್ಕೆಯಾಗಿವೆ. 127 ಸ್ಥಾನಗಳಿಗೆ 101 ಜನ ಸ್ಪರ್ಧಿಸುತ್ತಿದ್ದಾರೆ.
ಕೊಲ್ಹಾರದ 8 ಗ್ರಾಪಂಗಳ 144 ಸ್ಥಾನಗಳಲ್ಲಿ 14 ಅವಿರೋಧ ಆಯ್ಕೆಯಾಗಿದ್ದು, 130 ಸ್ಥಾನಗಳಿಗೆ 87 ಜನ ಸ್ಪರ್ಧಿಸುತ್ತಿದ್ದಾರೆ.
ಮುದ್ದೇಬಿಹಾಳದ 20 ಗ್ರಾಪಂಗಳ 326 ಸ್ಥಾನಗಳ ಪೈಕಿ 45 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಇನ್ನುಳಿದ 281 ಸ್ಥಾನಗಳಿಗೆ 326 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ತಾಳಿಕೋಟೆ 14 ಗ್ರಾಪಂಗಳ 258 ಸ್ಥಾನಗಳ ಪೈಕಿ 29ಕ್ಕೆ ಅವಿರೋಧ ಆಯ್ಕೆಯಾಗಿದ್ದು, ಬಾಕಿ ಇರುವ 229 ಸ್ಥಾನಗಳಿಗೆ 312ಜನ ಸ್ಪರ್ಧಿಸುತ್ತಿದ್ದಾರೆ
ಅವಿರೋಧ ಆಯ್ಕೆ ಕುರಿತ ಬಿಸಿ ಬಿಸಿ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ ಮೊದಲ ಹಂತದ ಚುನಾವಣೆಯಲ್ಲಿ 250 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಬ. ಬಾಗೇವಾಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 56 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದಂತೆ ಮುದ್ದೇಬಿಹಾಳ- 45, ತಿಕೋಟಾ- 44, ಬಬಲೇಶ್ವರ- 33, ತಾಳಿಕೋಟೆ- 29, ನಿಡಗುಂದಿ- 17, ಕೊಲ್ಹಾರ- 14, ವಿಜಯಪುರ ತಾಲೂಕಿನಲ್ಲಿ 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಡಿ. 14ರಂದು 835 ನಾಮಪತ್ರ ಸಲ್ಲಿಕೆ
ಗ್ರಾಪಂ ಎರಡನೇ ಹಂತದ ಚುನಾವಣೆಗೆ ಡಿ.14 ರಂದು ವಿವಿಧ ಗ್ರಾಪಂಗಳಲ್ಲಿ ಒಟ್ಟು 835 ನಾಮಪತ್ರಗಳು ಸಲ್ಲಿಕೆಯಾಗಿವೆ.
ಇಂಡಿ-162, ಚಡಚಣ- 69, ಸಿಂದಗಿ-425, ದೇ.ಹಿಪ್ಪರಗಿ-179 ಹೀಗೆ ಒಟ್ಟು 835 ಗ್ರಾಪಂಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.