ಜಿಲ್ಲೆ

ಮೀನು ಸಾಕಾಣಿಕೆಯಿಂದ ಆದಾಯ ವೃದ್ಧಿ

ವಿಜಯಪುರ: ರೈತರು ಕೃಷಿ ಜತೆಗೆ ಮೀನು ಕೃಷಿಯಂತ ಉಪ ಪದ್ಧತಿಗಳನ್ನು ಅನುಸರಿಸುವುದರಿಂದ ಹೆಚ್ಚಿನ ಆದಾಯ ತಮ್ಮದಾಗಿಸಿಕೊಳ್ಳಬಹುದೆಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದರು.

ಇಲ್ಲಿನ ಮೀನುಗಾರಿಕೆ ಇಲಾಖೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2020-21ನೇ ಸಾಲಿನ ರಾಜ್ಯವಲಯ ಸಂಶೋಧನೆ ವಿಸ್ತರಣೆ ವಸ್ತು ಪ್ರದರ್ಶನ ಮತ್ತು ತರಬೇತಿ ಕಾರ್ಯಕ್ರಮದಡಿ ಮೀನು ಕೃಷಿಕರ ದಿನಾಚರಣೆ ಹಿನ್ನೆಲೆ ಮೀನು ಮರಿ ವಿತರಿಸಿ ಅವರು ಮಾತನಾಡಿದರು. ಇಂದು ಅನೇಕ ರೈತರು ಕೃಷಿ ಹೊಂಡಗಳಲ್ಲಿಯೇ ಮೀನು ಸಾಕುವ ಮೂಲಕ ಆದಾಯ ವೃದ್ಧಿಸಿಕೊಂಡಿದ್ದಾರೆ. ಕೆರೆ-ಕಟ್ಟೆ, ಬಾವಿ, ಹೊಂಡಗಳಲ್ಲಿ ಮೀನು ಮರಿ ಸಾಕಿ ಹೆಚ್ಚಿನ ಲಾಭ ಪಡೆದುಕೊಳ್ಳಬೇಕು ಎಂದರು.

ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಜಗದೀಶ ಪಾಟೀಲ, ಮೀನುಗಾರಿಕೆ ಸಹಾಯಕ ನಿರ್ದೇಶಕ ಶ್ರೀಶೈಲ ಗಂಗನಳ್ಳಿ, ಮೀನುಗಾರಿಕೆ ಸಂಶೋಧನೆ ಕೇಂದ್ರದ ಮುಖ್ಯಸ್ಥ ವಿಜಯಕುಮಾರ ಪಾಟೀಲ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಬಾಬು ಲಮಾಣಿ ಮತ್ತಿತರರಿದ್ದರು.