ವಿಜಯಪುರ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ನಾಲ್ವರು ಮೃತಪಟ್ಟಿದ್ದು, 67 ಜನರಿಗೆ ಕರೊನಾ ಸೋಂಕು ದೃಢವಾಗಿದೆ. 113 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚುತ್ತಿದ್ದು, ಸೋಮವಾರ 112, ಮಂಗಳವಾರ 113 ಜನರು ಗುಣಮುಖರಾಗಿದ್ದಾರೆ. ಈವರೆಗೆ 5,938 ಜನರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಗುಣಮುಖರ ಸಂಖ್ಯೆ ಆರು ಸಾವಿರ ಗಡಿ ಸನಿಹದಲ್ಲಿದೆ.
ಒಟ್ಟು 74,655 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ 66,782 ಜನರ ವರದಿ ನೆಗೆಟಿವ್ ಬಂದಿದೆ. 6,743 ಜನರಿಗೆ ಪಾಸಿಟಿವ್ ದೃಢವಾಗಿದ್ದು, ಇನ್ನೂ 500 ಜನರ ವರದಿ ಬರಬೇಕಿದೆ. 695ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 55,346 ಜನರ ಮೇಲೆ ನಿಗಾ ವಹಿಸಲಾಗಿದೆ. 42,618 ಜನರು ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. 6,680 ಜನರು ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಈ ವರೆಗೆ 110 ಜನರು ಕರೊನಾಗೆ ಬಲಿಯಾಗಿದ್ದಾರೆ.
ವಿಜಯಪುರ ತಾಲೂಕು ವ್ಯಾಪ್ತಿ 3533, ಬಸವನಬಾಗೇವಾಡಿ 675, ಬಬಲೇಶ್ವರ 65, ಚಡಚಣ 40, ದೇವರಹಿಪ್ಪರಗಿ 59, ಇಂಡಿ 605, ಕೊಲ್ಹಾರ 57, ಮುದ್ದೇಬಿಹಾಳ 650, ನಿಡಗುಂದಿ 36, ಸಿಂದಗಿ 582, ತಾಳಿಕೋಟೆ 212, ತಿಕೋಟಾ 76 ಹಾಗೂ ಇತರ ಜಿಲ್ಲೆಗಳಿಂದ ಆಗಮಿಸಿದ 153 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ.