ಜಿಲ್ಲೆ

ಮುಂಜಾಗ್ರತೆಯಿಂದ ಕರೋನಾಕ್ಕೆ ಮದ್ದು

Vijayapura

ವಿಜಯಪುರ: ವಿಶ್ವದಲ್ಲೇ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿ, ಜನರನ್ನು ಭಯಭೀತರನ್ನಾಗಿ ಮಾಡಿದ ಕರೋನಾ ಬಗ್ಗೆ ಜನಜಾಗೃತರಾಗಬೇಕೆಂದು ಅಲ್ ಅಮೀನ್ ಸಂಸ್ಥೆ ನಿರ್ದೇಶಕ ಡಾ. ಬಿ.ಎಸ್. ಪಾಟೀಲ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ, ಕಿಡ್ನಿಕೇರ್ ಆಸ್ಪತ್ರೆ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರಲ್ಲಿ ಕರೋನಾ ರೋಗ ನಿಯಂತ್ರಣ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚು ಕೆಮ್ಮುವುದು ಮತ್ತು ನೆಗಡಿ ಕಾಣಿಸಿಕೊಳ್ಳುವ ಮೂಲಕ ಲಕ್ಷಣಗಳಾಗಿವೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಈ ರೋಗದ ಕುರಿತು ಜಿಲ್ಲಾಸ್ಪತ್ರೆ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎಸ್.ಎಸ್. ನಂದಿ, ಗಾಂಧಿಚೌಕ್ ಪೊಲೀಸ್ ಠಾಣೆ ಎಸ್‌ಐ ಎಸ್.ಬಿ. ಗೌಡರ ಮಾತನಾಡಿ, ವಿಶ್ವದಾದ್ಯಂತ ಕರೋನಾ ರೋಗ ಹರಡುತ್ತಿದ್ದು, ಈ ಮಾರಕ ಸೊಂಕಿಗೆ ಸಾವಿರಾರು ಜನ ಬಲಿಯಾಗಿದ್ದಾರೆ. ಜಾಗೃತಿಯೊಂದೆ ಈ ರೋಗ ನಿಯಂತ್ರಕ್ಕೆ ಮದ್ದು ಎಂದು ಹೇಳಿದರು.
ಕಿಡ್ನಿಕೇರ್ ಆಸ್ಪತ್ರೆಯ ಡಾ.ಸುರೇಶ ಕಾಗಲಕರರೆಡ್ಡಿ ಮಾತನಾಡಿ, ಕರೋನಾ ವೈರಸ್‌ದಿಂದ ಜನರಲ್ಲಿ ಭಯ ಆವರಿಸಿದೆ. ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಜನಜಾಗೃತಿ ಮೂಡಿಸಬೇಕು. ಸಾರ್ವಜನಿಕರೂ ಸಹ ಜಾಗೃತರಾಗಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಡಾ.ಕಿರಣ ಓಸ್ವಾಲ್, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಗಿರೀಶ ಕುಲ್ಲೊಳ್ಳಿ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಂಡೆಪ್ಪ ತೇಲಿ, ತಾಲೂಕು ಘಟಕದ ಅಧ್ಯಕ್ಷ ಮೌನೇಶ್ವರ ಮೇಟಿ, ಮಕ್ಕಳ ಸಾಹಿತಿ ಶಾಂತಾ ಜೋಗೆನ್ನವರ ಮತ್ತಿತರರು ಮಾತನಾಡಿದರು.
ವಿ.ಜಿ.ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ. ಸಿಂದಗಿಕರ, ಎಸ್.ಬಿ. ಕುಲಕರ್ಣಿ, ಆರ್.ಪಿ. ಕೊಲ್ಹಾರ, ಎಸ್.ಎನ್. ಪಾಟೀಲ, ಎಸ್.ಎಂ. ಮುಳವಾಡ, ಎಂ.ಎಸ್. ಸಕ್ರಿ, ಆರ್.ಸಿ. ಮೈದರಗಿ, ಎ.ಎಸ್. ಹಾದಿಮನಿ, ಸದ್ದಾಂ ಕಾಗಲ, ಸುರೇಶ ಹುಬ್ಬಳ್ಳಿ, ಬಸು ಶಾಸಿ, ಸುನೀಲ ರಾಠೋಡ ನತ್ತುತರರು ಉಪಸ್ಥಿತರಿದ್ದರು.