ವಿಜಯಪುರ: ಮಹಾಮಾರಿ ಕರೊನಾ ಹಿನ್ನೆಲೆ ತೀವ್ರ ಸಂಕಷ್ಟಕ್ಕೀಡಾಗಿರುವ ಮಂಗಳಮುಖಿಯರಿಗೆ ಯುವ ಭಾರತ ಸಂಘಟನೆಯಿಂದ ಶನಿವಾರ ದಿನಸಿ ವಿತರಿಸಲಾಯಿತು.
ಸಂಘಟನೆ ಅಧ್ಯಕ್ಷ ಉಮೆಶ ಕಾರಜೋಳ ನೇತೃತ್ವ ನಗರದ ಎಪಿಎಂಸಿ ಹತ್ತಿರದಲ್ಲಿರುವ ಅವರ ಮನೆಗಳಿಗೆ ತೆರಳಿ ತಿಂಗಳಿಗಾಗುವಷ್ಟು ದಿನಸಿ ಹಂಚಿಕೆ ಮಾಡಲಾಯಿತು. ಕಾರ್ಯಕರ್ತರಾದ ವಿನೋದಕುಮಾರ ಮಣೂರ, ಸಂತೋಷ ಝಳಕಿ, ವೀರೇಶ ಗೊಬ್ಬುರ, ಶ್ರೀಶೈಲ ಗೆರಡೆ, ಈರಯ್ಯ ಹುಣಸಗಿಮಠ, ಬಸವರಾಜ ಕರಿಕಬ್ಬಿ ಉಪಸ್ಥಿತರಿದ್ದರು.