ಜಿಲ್ಲೆ

ಹೆಣ್ಣು ಮಗುವನ್ನು ವಿದ್ಯಾವಂತೆಯನ್ನಾಗಿಸಿ

ವಿಜಯಪುರ: ಕಳೆದ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಸಾವಿರ ಪುರುಷ ಸಂಖ್ಯೆಗೆ 935 ಮಹಿಳೆಯರ ಸಂಖ್ಯೆ ಇದೆ. ಲಿಂಗ ಅಸಮಾನತೆ ಹೋಗಲಾಡಿಸಲು ಕೇಂದ್ರ ಸರ್ಕಾರ ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆ ಆರಂಭಿಸಿದೆ. ಪೋಷಕರು ಗಂಡು ಹೆಣ್ಣು ಎನ್ನದೆ ಮಕ್ಕಳನ್ನು ರಕ್ಷಿಸಿ, ಓದಿಸಲು ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಬಿಬಿಬಿಪಿ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ನ್ಯಾ. ರವೀಂದ್ರ ಕಾರಬಾರೆ ತಿಳಿಸಿದರು.
ನಗರದ ಅಗಸ್ತ್ಯ ಫೌಂಡೇಷನ್ ವಿಜ್ಞಾನ ಕೇಂದ್ರ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ‘ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ’ ಕಾರ್ಯಕ್ರಮದಡಿ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕರಕುಶಲ ವಸ್ತು ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಗೀತಾಂಜಲಿ ಮಾಡೆಲ್ ಶಾಲೆ ವಿದ್ಯಾರ್ಥಿಗಳು ಪ್ರಥಮ, ಮರಾಠಿ ವಿದ್ಯಾಲಯ ಹಾಗೂ ಉರ್ದು ಶಾಲೆ ನಂ.11ರ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, ಆಲಮೇಲ ಉರ್ದು ಶಾಲೆ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದುಕೊಂಡರು.
1987 ರ ಕಾಯ್ದೆ ಅನ್ವಯ ಹೆಣ್ಣು ಮಕ್ಕಳಿಗೆ ಕಾನೂನಿನ ಬಗ್ಗೆ ಸೂಕ್ತ ಸಲಹೆಗಳನ್ನು ನೀಡುತ್ತಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲು ಹಾಗೂ ಸೂಕ್ತ ಸಾಕ್ಷಾೃಧಾರಗಳಿದ್ದಲ್ಲಿ ಶಿಕ್ಷೆಗೆ ಒಳಪಡಿಸಲು ಅವಕಾಶವಿದೆ ಎಂದರು.
ಡಾ. ಮಲ್ಲಮ್ಮ ಯಾಳವಾರ, ನಿರ್ಮಲಾ ದೊಡಮನಿ, ವಿಜಯಲಕ್ಷ್ಮಿ ಬಾಳಿ, ಸುಜಾತಾ ರಾಠೋಡ ಮತ್ತಿತರರಿದ್ದರು.