ಜಿಲ್ಲೆ

ಜಗತ್ತಿಗೆ ಮಾದರಿ ಭಾರತೀಯ ಸಂಸ್ಕೃತಿ

ವಿಜಯಪುರ: ‘ಯತ್ರ ನಾರ‌್ಯಸ್ತು ಪೂಜ್ಯತೆ ರಮಂತೆ ತತ್ರ ದೇವತಃ’ ಎಂಬ ಮಾತಿನಿಂದ ನಮ್ಮ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಬುರಣಾಪುರದ ಯೋಗೇಶ್ವರಿ ಮಾತಾಜಿ ಹೇಳಿದರು.
ನಗರದ ಬಿಎಲ್‌ಡಿಇ ಸಂಸ್ಥೆಯ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ದಲ್ಲಿ ಮಹಿಳೆಯರ ವೇದಿಕೆಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಡಾ.ಎಚ್.ಎಂ. ಮುಜಾವರ್ ಅಧ್ಯಕ್ಷತೆ ವಹಿಸಿ, ಹೆಣ್ಣೆ ಜೀವನದ ಕಣ್ಣು. ಪರಿಪೂರ್ಣ ಜೀವನಕ್ಕೆ ಮೂಲ ಹೆಣ್ಣು ಎಂದು ಹೇಳಿದರು.
ಪ್ರೊ.ಡಿ.ಬಿ. ಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಣ್ಣು ಸುಖ ಸಂಸಾರದ ಕಣ್ಣು. ಇಂದಿನ ದಿನಮಾನದಲ್ಲಿ ಹೆಣ್ಣಿನ ಸಾಧನೆ ಶ್ಲಾಘನೀಯ ಎಂದರು.
ಡಾ.ಭಾರತಿ ಹಿರೇಮಠ, ಎಂಬಿಎ ವಿಭಾಗದ ನಿರ್ದೇಶಕ ಎಸ್.ಎಸ್. ಕುಲಕರ್ಣಿ, ಮಹಿಳೆಯರ ವೇದಿಕೆ ಅಧ್ಯಕ್ಷೆ ಪ್ರೊ.ಲಕ್ಷ್ಮಿ ಬಾಗಲಕೋಟ, ವಿದ್ಯಾರ್ಥಿನಿ ಒಕ್ಕೂಟದ ಕಾರ್ಯದರ್ಶಿ ಶ್ವೇತಾ ಜೈನ ಮಾತನಾಡಿದರು. ಬಿಸಿಎ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್. ಜೇವೂರ, ಪ್ರೊ.ಪ್ರದೀಪ ಕುಂಬಾರ, ಎಂ.ಬಿ. ಪಾಟೀಲ, ಪ್ರೊ.ಸಿ.ಪಿ. ದಡೇಕರ, ಪ್ರೊ.ಸೋಮಶಂಕರ ಹಿರೇಮಠ, ಪ್ರೊ.ಪ್ರದೀಪ ಕುಂಬಾರ ಉಪಸ್ಥಿತರಿದ್ದರು. ಭವ್ಯಾ ಹಿರೇಮಠ ನಿರೂಪಿಸಿದರು. ಪ್ರಿಯಾಂಕ ಯಳೆಗಾಂವ ವಂದಿಸಿದರು.

ಹಸುಳೆಗೆ ಅಳುವುದೊಂದೆ ಗೊತ್ತು, ಬೇರೇನು ಗೊತ್ತಿರುವುದಿಲ್ಲ. ಮಗುವಿನ ಬೇಕುಬೇಡಗಳನ್ನು ಅರಿತು ಪಾಲನೆ ಮಾಡುವ ಕಣ್ಣಿಗೆ ಕಾಣುವ ದೇವತೆ ‘ಅಮ್ಮ’.
ಯೋಗೇಶ್ವರಿ ಮಾತಾಜಿ, ಬುರಣಾಪುರ