ಬಾಗಲಕೋಟೆ: ನಾಡಿನ ಹಿರಿಯ ಉದ್ಯಮಿ, ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಜೀವನಾಧಾರಿತ ವಿಜಯಾನಂದ ಚಿತ್ರ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.
ಕನ್ನಡಿಗರು, ಕನ್ನಡದ ಸಾಧಕನ ಕುರಿತು ನಿರ್ಮಿಸಿರುವ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಬಯೋಪಿಕ್ ಚಿತ್ರ ಇದಾಗಿದೆ. ಚಿತ್ರ ಪ್ರದರ್ಶನಕ್ಕೆ ಬಾಗಲಕೋಟೆ ಜಿಲ್ಲೆಯಲ್ಲೂ ಚಿತ್ರಮಂದಿರಗಳಲ್ಲಿ ಸಜ್ಜಾಗಿವೆ.
ಯು ಸರ್ಟಿಫಿಕೇಟ್ ಪಡೆದಿರುವ ವಿಜಯಾನಂದ ಚಿತ್ರ ವೀಕ್ಷಿಸಲು ಈಗಾಗಲೇ ಪ್ರೇಕ್ಷಕ ಪ್ರಭುಗಳು ಸನ್ನದ್ದರಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಡಾ.ವಿಜಯ ಸಂಕೇಶ್ವರ ಬೆಳೆದು ಬಂದ ದಾರಿ ಯುವ ಉದ್ಯಮಿಗಳಿಗೆ ದಾರಿದೀಪ.
ಕನ್ನಡದ ಈ ಸಾಧಕನ ಜೀವನಾಧಾರಿತ ಚಿತ್ರ ಬಿಡುಗಡೆ ಆಗುತ್ತಿರುವ ಹಿನ್ನಲೆಯಲ್ಲಿ ಚಿತ್ರವನ್ನು ಸಂಭ್ರಮದಿಂದ ಸ್ವಾಗತಿಸಿಕೊಳ್ಳಲು ಚಿತ್ರಪ್ರೇಮಿಗಳು ಭರದ ಸಿದ್ದತೆ ಮಾಡಿಕೊಂಡಿದ್ದಾರೆ.
ವಿಜಯಾನಂದ ಚಿತ್ರ ಯಶಸ್ವಿಯಾಗಲಿ ಎಂದು ಇಂದು ಬಾಗಲಕೋಟೆ ನಗರದಲ್ಲಿ ಡಾ.ಸಂಕೇಶ್ವರ ಅವರ ಅಭಿಮಾನಿಗಳು ಈಗಾಗಲೇ ನಗರದ ವಿವಿಧೆಡೆ ಚಿತ್ರದ ಬೃಹತ್ ಕಟೌಟ ಅಳವಡಿಸಿದ್ದರೇ
ಇಂದು ಬೆಳಗ್ಗೆ ಹೊಳೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಿದ್ದಾರೆ. ವೀರೇಶ ಉಮಚಗಿ, ವಿಜಯ ಕತ್ತಿ ಹಾಗೂ ಸ್ನೇಹಿತರ ಬಳಿಕ ಪೂಜೆ ಸಲ್ಲಿಸಲಿದ್ದಾರೆ.
ಬಾಗಲಕೋಟೆ ಶಕ್ತಿ ಚಿತ್ರಮಂದಿರ ಆವರಣದಲ್ಲಿ ಬೆಳಗ್ಗೆ ೯.೩೦ಕ್ಕೆ ಕನ್ನಡ ಚಲನಚಿತ್ರ ನಿರ್ಮಾಪಕ ಘನಶಾಮ ಭಾಂಡಗೆ ಹಾಗೂ ಕೆಂಗುಲಾಬಿ ಚಿತ್ರ ತಂಡದಿಂದ ವಿಜಯಾನಂದ ಚಿತ್ರಕ್ಕೆ ಕೇಕ್ ಕತ್ತರಿಸಿ ಶುಭಹಾರೈಸಲಿದ್ದಾರೆ. ಹಾಗೆಯೇ ಅಭಿಮಾನಿಗಳು ಚಿತ್ರಮಂದಿರದ ಅಲಂಕಾರ, ಪೂಜೆ, ಸಿಹಿ ವಿತರಣೆ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಲು ಸಜ್ಜಾಗಿದ್ದಾರೆ.
ಇಂದು ತೆರೆಗೆ ಬರುತ್ತಿರುವ ವಿಜಯಾನಂದ ಚಿತ್ರ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ಡಾ.ಸಂಕೇಶ್ವರ ಅವರ ಧರ್ಮಪತ್ನಿ ಶ್ರೀಮತಿ ಲಲಿತಾ ಸಂಕೇಶ್ವರ ಅವರು ಬಾಗಲಕೋಟೆ ಮಗಳು ಎನ್ನುವುದು ಮತ್ತೊಂದು ವಿಶೇಷ.
ವಿಆರ ಎಲ್ ಫಿಲ್ಮ್ ಆನಂದ ಸಂಕೇಶ್ವರ ನಿರ್ಮಾಣ ಮಾಡಿರುವ ವಿಜಯಾನಂದ ಚಿತ್ರವನ್ನು ರಿಷಿಕಾ ಶರ್ಮಾ ನಿರ್ದೇಶಿಸಿದ್ದಾರೆ ನಾಯಕ ನಟನಾಗಿ ನಿಹಾಲ ನಾಯಕಿಯಾಗಿ ಸಿರಿ ಪ್ರಲ್ಹಾದï, ದಿಗ್ಗಜ ನಟರಾದ ಅನಂತನಾಗ, ರವಿಚಂದ್ರನ, ವಿನಯಾ ಪ್ರಸಾದ ಸೇರಿ ಹಿರಿ, ಕಿರಿಯ ತಾರಾ ಬಳಗವನ್ನು ಹೊಂದಿದೆ. ಬಾಗಲಕೋಟೆ ಜೆಲ್ಲೆಯಾದ್ಯಂತ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಇಂದು ಚಿತ್ರ ತೆರೆ ಕಾಣಲಿದೆ. ಬಾಗಲಕೋಟೆ ನಗರದ ಶಕ್ತಿ ಚಿತ್ರಮಂದಿರ, ಚೋಟು ಮಹಾರಾಜ್, ಇಳಕಲ್ ನಗರದ ಶ್ರೀನಿವಾಸ ಚಿತ್ರಮಂದಿರ, ಮುಧೋಳ ನಗರದ ಶಿವಕಲ್ಯಾಣ ಥೇಟರ ಹಾಗೂ ಸೂರ್ಯವಂಶಿ ಮಲ್ಟಿಪ್ಲೆಕ್ಸ್, ಬಾದಾಮಿ ಪಟ್ಟಣದ ಮಹಾಕೂಟೇಶ್ವರ ಚಿತ್ರಮಂದಿರ, ಜಮಖಂಡಿ ನಗರದ ಸುವರ್ಣ, ಮಹಾಲಿಂಗಪುರದ ಅಸ್ಟಗಿ, ಬೀಳಗಿ ಪಟ್ಟಣದ ಶ್ರೀನಿವಾಸ, ಗುಳೇದಗುಡ್ಡ ಪಟ್ಟಣದ ಅಂಕಿತಾ, ರಬಕವಿಯ ಶ್ರೀನಿವಾಸ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ.
ಕೋಟ್…
ಡಾ.ವಿಜಯ ಸಂಕೇಶ್ವರ ಅವರು ಯಾವ ಕ್ಷೇತ್ರದಲ್ಲಿ ಪ್ರವೇಶ ಮಾಡಿದ್ದಾರೋ ಅಲ್ಲಿ ಅತ್ಯಂತ ಯಶಸ್ವಿಯಾಗಿದ್ದರೇ. ಇದೀಗ ಅವರದ್ದೇ ಜೀವನಾಧಾರಿತ ವಿಜಯಾನಂದ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು, ಇಲ್ಲಿಯೂ ಸಹ ಹಡ್ರೆಂಡ್ ಪರ್ಸೆಟ್ ಯಶಸ್ಸಿಯಾಗುತ್ತಾರೆ. ಸಂಕೇಶ್ವರ ಅವರ ಚಿತ್ರರಂಗ ಪ್ರವೇಶದಿಂದ ವಿಶೇಷವಾಗಿ ಉತ್ತರ ಕರ್ನಾಟಕದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಾಂತ್ರಿಕ ವರ್ಗಕ್ಕೆ ಪ್ರೋತ್ಸಾಹ ಸಿಕ್ಕಂತಾಗಿದೆ.
-ಘನಶಾಮ ಭಾಂಡಗೆ
ಇಂಗಳೆ ಮಾರ್ಗ, ಕೆಂಗುಲಾಬಿ ಚಿತ್ರದ ನಿರ್ಮಾಪಕರು, ಬಾಗಲಕೋಟೆ.