ಕೆರೆತಾಂಡಾದಲ್ಲಿ ಶಾಲಾ ಆವರಣ ಸ್ವಚ್ಚತೆ ಮಾಡಿದರು. 
ವಿಜಯನಗರ

ಗಾಂಧಿ, ಶಾಸ್ತ್ರಿ ಜಯಂತಿ: ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ

ಹೊಸಪೇಟೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ನಿಮಿತ್ತ ತಾಲೂಕಿನ ಕಮಲಾಪುರದ ಕೆರೆತಾಂಡಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಯುವಕರು ಶುಕ್ರವಾರ ಮಾದರಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ನಂತರ ಇಬ್ಬರೂ ಮಹನೀಯರ ಫೋಟೋಗಳಿಟ್ಟು ಜಯಂತಿ ಆಚರಿಸಿದರು.

ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಿತರಾದ ಯುವ ಸಮೂಹ, ಮುಂಜಾನೆಯಿಂದಲೇ ಶಾಲಾ ಆವರಣದಲ್ಲಿ ಶ್ರಮದಾನ ಕೈಗೊಂಡರು. ಶಾಲೆಯ ಆವರಣದಲ್ಲಿದ್ದ ಕಸ-ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಅನಗತ್ಯ ಗಿಡಗಂಟಿಗಳನ್ನು ತೆರವುಗೊಳಿಸಿ ಪರಿಸರವನ್ನು ಅಚ್ಚುಕಟ್ಟಾಗಿ ಸಜ್ಜುಗೊಳಿಸಿದರು.

ಈ ವೇಳೆ ಮಾತನಾಡಿದ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಎಸ್.ಎಸ್‌.ನಾಯ್ಕ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಸ್ವಚ್ಛತೆಯ ಪರಿಕಲ್ಪನೆ ಹಾಗೂ ಶಾಸ್ತ್ರೀಜಿಯವರ ದೇಶಪ್ರೇಮವನ್ನು ಯುವಜನತೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಲೆಗಳು ನಮ್ಮ ಊರಿನ ದೇವಾಲಯಗಳಿದ್ದಂತೆ, ಅವುಗಳ ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಯುವಕರಾದ ಅರ್ಜುನನಾಯ್ಕ, ಲಕ್ಷ್ಮಣ ನಾಯ್ಕ, ಹೇಮಗಿರಿ ನಾಯ್ಕ, ನವೀನ್ ಕುಮಾರ್, ಚಂದ್ರುನಾಯ್ಕ ಇತರರಿದ್ದರು.