ಹೊಸಪೇಟೆ ಬಲಿಜ ಭವನದಲ್ಲಿ ಭಾನುವಾರ ನಡೆದ ಶ್ರೀ ಯೋಗಿ ನಾರೇಯಣ ಆರಾಧನ ಮಹೋತ್ಸವಕ್ಕೆ ಬಲಿಜ ಸಂಘದ ಅಧ್ಯಕ್ಷ ಸತೀಶ್ ಕಾಂಡ್ರಾ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಪ್ರಮುಖರಾದ ಪಾಂಡುರAಗ, ರವಿಕುಮಾರ್, ಕಾಳಿದಾಸ, ಯೋಗಾನಂದ, ಭೋಜರಾಜೇಂದ್ರ ಇತರರಿದ್ದರು.
- ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಅಭಿಪ್ರಾಯ
ಹೊಸಪೇಟೆ: ಯೋಗಿ ನಾರೇಯಣ ತಾತನವರು ಕೇವಲ ಒಬ್ಬ ಯೋಗಿಯಾಗಿರಲಿಲ್ಲ, ಅವರು ಸಮಾಜದ ಅಂಕುಡೊAಕುಗಳನ್ನು ತಿದ್ದುವ ದಾರ್ಶನಿಕರಾಗಿದ್ದರು ಎಂದು ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ತಿಳಿಸಿದರು.
ಬಲಿಜ ಸಂಘದಿAದ ನಗರದ ಬಲಿಜ ಭವನದಲ್ಲಿ ಭಾನುವಾರ ನಡೆದ ಶ್ರೀ ಯೋಗಿ ನಾರೇಯಣ 191ನೇ ಆರಾಧನ ಮಹೋತ್ಸವದಲ್ಲಿ ಮಾತನಾಡಿದರು. ಮಾನವನಾಗಿ ಹುಟ್ಟಿದ ಮೇಲೆ ಮಾನವೀಯತೆ ಮೆರೆಯುವುದೇ ಶ್ರೇಷ್ಠ ಧರ್ಮ ಎಂಬ ಅವರ ನುಡಿ ಯುವಪೀಳಿಗೆಗೆ ದಾರಿದೀಪವಾಗಿದೆ. ತಾತನವರು ತಮ್ಮ ಬದುಕಿನುದ್ದಕ್ಕೂ ಜಾತಿ, ಮತ ಭೇದಗಳನ್ನು ಮೀರಿ ಎಲ್ಲರನ್ನೂ ಸಮಾನವಾಗಿ ಕಂಡವರು. ಅವರ ತತ್ವಾದರ್ಶಗಳನ್ನು ಪಾಲಿಸುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ. ಯೋಗಿ ನಾರೇಯಣರು ಬೋಧಿಸಿದ ಅಧ್ಯಾತ್ಮವು ಕೇವಲ ವ್ಯಕ್ತಿಗತ ಏಳಿಗೆಗಾಗಿ ಅಲ್ಲ, ಬದಲಾಗಿ ಸಮಾಜದ ಒಳಿತಿಗಾಗಿ ಮೀಸಲಾಗಿತ್ತು. ಅನ್ನದಾಸೋಹ ಮತ್ತು ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಅವರು ಕೈವಾರ ಕ್ಷೇತ್ರವನ್ನು ಭಕ್ತಿ ಮತ್ತು ಸೇವಾ ಕೇಂದ್ರವನ್ನಾಗಿ ರೂಪಿಸಿದರು.
ಬಲಿಜ ಸಮಾಜದ ಕುಲ ಗುರು ಶ್ರೀ ಯೋಗಿ ನಾರೇಯಣ ದೇಗುಲ ನಿರ್ಮಾಣಕ್ಕಾಗಿ ಹುಡಾದಿಂದ ಸಿ.ಎ.ಸೈಟ್ ಬರುವ ಹಾಗೆ ಸರ್ಕಾರ ಕ್ಕೆ ಮನವಿ ಮಾಡಲಾಗುವುದು. ವೈಯುಕ್ತಿಕವಾಗಿ ಲಕ್ಷ ಸಹಾಯ ಧನವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇ70 ರಷ್ಟು ಅಂಕಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಅಂಜಲಿ ಭರತನಾಟ್ಯ ಕಲಾ ತಂಡದಿAದ ಸಮೂಹ ನೃತ್ಯ ಏರ್ಪಡಿಸಲಾಗಿತ್ತು.
ಬಲಿಜ ಸಂಘದ ಅಧ್ಯಕ್ಷ ಸತೀಶ್ ಕಾಂಡ್ರಾ, ಪ್ರಮುಖರಾದ ಪಾಂಡುರAಗ, ರವಿಕುಮಾರ್, ಕಾಳಿದಾಸ, ಯೋಗಾನಂದ, ಭೋಜರಾಜೇಂದ್ರ, ಶ್ರೀನಿವಾಸ್ ದುರ್ಗಾಪ್ರಸಾದ್, ವಿನಾಯಕ್, ಪ್ರವೀಣ್, ಶಿವಾನಂದ, ಕಲಾಚಂದ್ರ, ತಿಪ್ಪೇಸ್ವಾಮಿ, ಪ್ರಕಾಶ್ ಕಟ್ಟಿಮನಿ ಇತರರಿದ್ದರು.