ಹೊಸಪೇಟೆ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ವಿಶೇಷ ಯೋಗ ಶಿಬಿರದ ಸಮಾರೋಪದಲ್ಲಿ ಎಸ್ಪಿ ಎಸ್.ಜಾಹ್ನವಿ ಮಾತನಾಡಿದರು. ಎಎಸ್ಪಿ ಜಿ.ಮಂಜುನಾಥ, ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ, ಸಂಚಾಲಕ ಅನಂತ್ ಜೋಶಿ ಇತರರಿದ್ದರು.
- ಯೋಗ ತರಬೇತಿ ಶಿಬಿರದ ಸಮಾರೋಪ ಎಸ್ಪಿ ಎಸ್.ಜಾಹ್ನವಿ ಸೂಚನೆ
ಹೊಸಪೇಟೆ: ಪೊಲೀಸ್ ಸಿಬ್ಬಂದಿಗೆ ನೀಡಲಾದ 15 ದಿನಗಳ ವಿಶೇಷ ಯೋಗ ಶಿಬಿರ ಯಶಸ್ವಿಯಾಗಿದೆ, ಇನ್ನು ಮುಂದೆ ಬೊಜ್ಜು ಇರುವ ಸಿಬ್ಬಂದಿ ಯೋಗ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು
ಎಂದು ಜಿಲ್ಲಾ ಪೊಲೀಸ್ ವರಿಷ್ಠರಾದ ಎಸ್.ಜಾಹ್ನವಿ ಹೇಳಿದರು.
ಪತಂಜಲಿ ಯೋಗ ಸಮಿತಿಯಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಡೆದ ವಿಶೇಷ ಯೋಗ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು. ಬಿಎಂಐ ಯಂತ್ರದ ಮೂಲಕ ಬೊಜ್ಜು ಪರೀಕ್ಷೆ ಮಾಡುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ. ಇದರ ಜತೆಗೆ ಬೊಜ್ಜು ಇರುವವರು ಯೋಗವನ್ನು ಕಡ್ಡಾಯವಾಗಿ ಮಾಡಲು ಸೂಚಿಸಲಾಗುವುದು ಎಂದರು.
ಸದ್ಯ ಹೊಸಪೇಟೆ ಉಪವಿಭಾಗದದ ಪೊಲೀಸರಿಗೆ ಯೋಗ ತರಬೇತಿ ನೀಡಲಾಗಿದೆ. ಕೂಡ್ಲಿಗಿ, ಹರಪನಹಳ್ಳಿ ಉಪವಿಭಾಗದ ಪೊಲೀಸರಿಗೂ ಶೀಘ್ರದಲ್ಲಿ ವಿಶೇಷ ಯೋಗ ಶಿಬಿರ ಹಮ್ಮಿಕೊಳ್ಳಲಾಗುವುದು. ಯೋಗಾಭ್ಯಾಸ ತರಬೇತಿ ಪಡೆದ ಪೊಲೀಸರು ತಮ್ಮ ಮನೆಗಳಲ್ಲಿಯೂ ಅಬ್ಯಾಸ ಮಾಡಬೇಕು. ಇದರಿಂದ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಪತAಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಮಾತನಾಡಿ, ಯೋಗದ ಜತೆಗೆ ಸಾತ್ವಿಕ ಆಹಾರವೂ ಮುಖ್ಯ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದನ್ನು ಕರ್ತವ್ಯದಲ್ಲಿ ಇರುವ ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.
ಎಎಸ್ಪಿ ಜಿ.ಮಂಜುನಾಥ್, ಪತಂಜಲಿ ಯೋಗ ಸಮಿತಿಯ ರಾಜ್ಯ ಸದಸ್ಯ ಬಾಲಚಂದ್ರ ಶರ್ಮಾ, ಜಿಲ್ಲಾ ಪ್ರಭಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ, ಪ್ರಮುಖರಾದ ಅನಂತ್ ಜೋಶಿ, ರಾಜೇಶ್ ಕರ್ವಾ, ಕೃಷ್ಣ ನಾಯ್ಕ, ಪೂಜಾ ಐಲಿ, ಅಶೋಕ್ ಚಿತ್ರಗಾರ್, ರಾಜಭಕ್ಷಿ, ಕವಿತಾ ಭಾಸ್ಕರ್, ಶ್ರೀರಾಮ್, ಚಂದ್ರಿಕಾ ಶ್ರೀರಾಮ್, ವಿಠೋಬಣ್ಣ, ಚಂದ್ರಿಕಾ ಶ್ರೀರಾಮ, ಕವಿತಾ ಭಾಸ್ಕರ, ಸುಜಾತಾ ಕರ್ಣಂ, ರಾಮು, ಯರಿಯಪ್ಪ, ಕರಿಬಸವರಾಜ, ರಾಮಚಂದ್ರ ಇತರರಿದ್ದರು.