ಹೊಸಪೇಟೆ ಫ್ರೀಡಂ ಪಾಕ್‌ನಲ್ಲಿ ಶನಿವಾರ ರಾತ್ರಿ ನಡೆದ ಯೋಗ ತರಬೇತಿ ಕೇಂದ್ರದ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮ ಪತಂಜಲಿ ವಿಜಯನಗರ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ, ಪ್ರಮುಖರಾದ ಉಮಾ ವಿಶ್ವನಾಥ್, ಬಾಲಚಂದ್ರ ಶರ್ಮಾ, ಕಿರಣ್ ಕುಮಾರ್, ಕನ್ನಿಕಾ ಪ್ರಹ್ಲಾದ್ ಭೂಪಾಳ್ ಇತರರಿದ್ದರು.
- ಪತಂಜಲಿ ಯೋಗ ಪೀಠದ ದಕ್ಷಿಣ ಭಾರತ ವರಿಷ್ಠ ಭವರ್‌ಲಾಲ್ ಆರ್ಯ ಅಭಿಪ್ರಾಯ
ಹೊಸಪೇಟೆ: ಆಹಾರ, ವಿಚಾರಗಳು ಸಾತ್ವಿಕವಾಗಿದ್ದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಪತಂಜಲಿ ಯೋಗ ಪೀಠದ ದಕ್ಷಿಣ ಭಾರತ ವರಿಷ್ಠ ಭವರ್‌ಲಾಲ್ ಆರ್ಯ ಹೇಳಿದರು.
ನಗರದ ಫ್ರೀಡಂ ಪಾಕ್‌ನಲ್ಲಿ ಶನಿವಾರ ರಾತ್ರಿ ನಡೆದ ಯೋಗ ತರಬೇತಿ ಕೇಂದ್ರದ ಮೂರನೇ ವಾರ್ಷಿಕೋತ್ಸವ ವಿಡಿಯೋ ಕಾನ್ಸಫರೆನ್ಸ್ ಮೂಲಕ ಮಾತನಾಡಿದರು.
ಜೀವನದಲ್ಲಿ ಅತಿ ಕಡಿಮೆ ತಪ್ಪು ಮಾಡುವ ಸಂಕಲ್ಪ ಮಾಡಬೇಕು, ನಿತ್ಯ ಯೋಗ, ಧ್ಯಾನ ಮಾಡುವುದರಿಂದ ನಮ್ಮ ದೇಹ, ಮನಸ್ಸುಗಳನ್ನು ಸಮಸ್ಥಿತಿಯಲ್ಲಿ ಇಡಲು ಸಾಧ್ಯವಿದೆ. ಅಪೇಕ್ಷೆ ಬೇಡ, ಯಾರನ್ನು ಉಪಾಕ್ಷಿಸುವುದೂ ಬೇಡ. ನಿರಂತರ ಯೋಗದಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಎಲ್ಲರನ್ನೂ ಸಮಚಿತ್ತದಿಂದ ನೋಡುವ, ಸಂತೃಪ್ತ, ಆರೋಗ್ಯವಂತ ಜೀವನ ನಡೆಸುವುದು ಸಾಧ್ಯವಿದೆ ಎಂದರು.
ಪತAಜಲಿ ವಿಜಯನಗರ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಮಾತನಾಡಿ, ರಾಜ್ಯಕ್ಕೆ ಮಾದರಿ ಎನ್ನುವ ರೀತಿಯಲ್ಲಿ ಫ್ರೀಡಂ ಪಾರ್ಕ್ ಯೋಗ ಕೇಂದ್ರ ಬೆಳೆದಿದೆ. ಅತ್ಯಂತ ಶಿಸ್ತುಬದ್ಧವಾಗಿ ಇಲ್ಲಿ ಯೋಗಾಭ್ಯಾಸ ನಡೆಯುತ್ತಿರುವುದರಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ, ಪ್ರಮುಖರಾದ ಉಮಾ ವಿಶ್ವನಾಥ್, ಬಾಲಚಂದ್ರ ಶರ್ಮಾ,
ಕಿರಣ್ ಕುಮಾರ್, ಕನ್ನಿಕಾ ಪ್ರಹ್ಲಾದ್ ಭೂಪಾಳ್, ಶ್ರೀರಾಮ್, ವಿಜಯಲಕ್ಷ್ಮಿ ಹಂದ್ರಾಳ್, ಅನಂತ ಜೋಶಿ, ಶೈಲಜಾ ಕಳಕಪ್ಪ, ವೀರಣ್ಣ ಕುಡುತಿನಿ ಇತರರಿದ್ದರು.