ಹೊಸಪೇಟೆಯಲ್ಲಿ ಗುರುವಾರ ನಿಜಶರಣ ಅಂಬಿಗರ ಚೌಡಯ್ಯನವರ ವಚನ ಜ್ಯೋತಿ ರಥಯಾತ್ರೆ ಗಂಗಾಮತ ಸಮಾಜದಿಂದ ಸ್ವಾಗತಿಸಲಾಯಿತು. ರಥಯಾತ್ರೆ ಸಂಚಾಲಕ ನಿಂಗಣ್ಣನ, ಸಮಾಜದ ಗೌರವಾಧ್ಯಕ್ಷ ವೈ.ಯಮುನೇಶ್, ಪ್ರಮುಖರಾದ ಎಸ್.ಗಾಳೆಪ್ಪ, ಬಾರಕೀರ ನಾಗರಾಜ, ಮಡ್ಡಿ ಹನುಮಂತಪ್ಪ, ವೆಂಕಪ್ಪ, ಉದಯಕುಮಾರ ಇತರರಿದ್ದರು. 
ವಿಜಯನಗರ

ವಚನ ಜ್ಯೋತಿ ರಥಯಾತ್ರೆಗೆ ಸ್ವಾಗತ

ಹೊಸಪೇಟೆ: ನಗರಕ್ಕೆ ಗುರುವಾರ ಆಗಮಿಸಿದ ನಿಜಶರಣ ಅಂಬಿಗರ ಚೌಡಯ್ಯನವರ ವಚನ ಜ್ಯೋತಿ ರಥಯಾತ್ರೆಯನ್ನು ಗಂಗಾಮತ ಸಮಾಜದಿಂದ ಬರಮಾಡಿಕೊಳ್ಳಲಾಯಿತು.

ರಥಯಾತ್ರೆ ಸಂಚಾಲಕ ನಿಂಗಣ್ಣ ಮಾತನಾಡಿ, ಕಲಬುರಗಿ ಜಿಲ್ಲೆಯ ಶಹಬಾದ ತಾಲೂಕಿನ ಭಂಕೂರಿನಿA ಡಿ.07 ರಿಂದ ಯಾತ್ರೆ ಆರಂಭವಾಗಿ ಈಗಾಗಲೇ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಸಂಚಾರ ಮಾಡಿದೆ. .14 ರಂದು ಯಾತ್ರೆ ಆರಂಭವಾದ ಮೂಲ ಸ್ಥಳದಲ್ಲಿಯೇ ಮುಕ್ತಾಯಗೊಳ್ಳಲಿದೆ ಎಂದರು.

ಚೌಡಯ್ಯನವರು ವಚನ ಸಾಹಿತ್ಯದ ಮುಖಾಂತರ ವಿಚಾರ ಕ್ರಾಂತಿಯ ಕಿಡಿಹಚ್ಚಿ ಅನ್ಯಾಯ, ಅಸಮಾನತೆ ಮತಾಂಧತೆ, ಮೂಡ ನಂಬಿಕೆಗಳ ವಿರುದ್ಧ ಸಿಡಿದೆದ್ದು, ಸಮಾನತೆ ಐಕ್ಯತೆ ಮೂಡಿಸಲು ಹೋರಾಡಿದರು. ತಮ್ಮ ನೇರ ನಡೆನುಡಿ, ನಿಷ್ಠೂರವಾದಿ ವಚನಕಾರರಲ್ಲಿ ಪ್ರಜ್ವಲಮಾನವಾಗಿ ಬೆಳಗುವ ದೃವತಾರೆಯಾಗಿದ್ದರು ಎಂದರು.

ಸಮಾಜದ ಗೌರವಾಧ್ಯಕ್ಷ ವೈ.ಯಮುನೇಶ್, ಪ್ರಮುಖರಾದ ಎಸ್.ಗಾಳೆಪ್ಪ, ಬಾರಕೀರ ನಾಗರಾಜ, ಮಡ್ಡಿ ಹನುಮಂತಪ್ಪ, ವೆಂಕಪ್ಪ, ಉದಯಕುಮಾರ, ಗುರುರಾಜ್, ಮರಿಯಪ್ಪ, ಗುರುಶಾಂತ, ನರಸಾಪುರ ಮಂಜುನಾಥ, ನಂದಿಹಳ್ಳಿನಾಗರಾಜ, ಬಸವರಾಜ್, ಎಸ್.ಭರ್ಮಪ್ಪ, ಎಸ್.ನಾಗರಾಜ, ಉಮಾಪತಿ, ಎಸ್.ಯಂಕಪ್ಪ ಇತರರಿದ್ದರು.