ಕಂಪ್ಲಿ ಫ್ಯಾಕ್ಟರಿ ಸಹಿಪ್ರಾ ಶಾಲೆಯ ಮಕ್ಕಳಿಗೆ ಗುಲಾಬಿ ಕೊಟ್ಟು ಶಾಲೆಗೆ ಸ್ವಾಗತಿಸಲಾಯಿತು. ಮುಖ್ಯಶಿಕ್ಷಕ ಹನುಮಂತಪ್ಪ, ಪ್ರಮುಖರಾದ ರಾಮಲಿಂಗ, ಬಿ.ಶೇಖರ್, ನಾಗರಾಜ, ಆದಿನಾರಾಯಣ ಇತರರಿದ್ದರು. 
ವಿಜಯನಗರ

ಕಂಪ್ಲಿಯಲ್ಲಿ ಮಕ್ಕಳಿಗೆ ಸಿಹಿ ಹಂಚಿ ಸ್ವಾಗತ

ಪ್ರಮುಖ ಮುಖ್ಯಾಂಶಗಳು

  • ಸಿಹಿ
  • ಗುಲಾಬಿ ಹೂ
  • ಸಮವಸ್ತ್ರ
ಕಂಪ್ಲಿ: 2026-27ನೇ ಸಾಲಿನ ಶೈಕ್ಷಣಿಕ ವರ್ಷಾರಂಭಗೊಂಡಿದ್ದು ಸೋಮವಾರ ಶಾಲೆದ್ವಾರಕ್ಕೆ ಮಾವಿನ ತಳಿರು ತೋರಣ, ಬಾಳೆಗೊನೆ ಕಟ್ಟಿ ಶೃಂಗರಿಸಲಾಗಿತ್ತು. ಶಾಲೆ ದ್ವಾರದಲ್ಲಿಯೇ ಮಕ್ಕಳಿಗೆ ಸಿಹಿಯೊಂದಿಗೆ ಗುಲಾಬಿ ಹೂ, ಸಮವಸ್ತ್ರ, ಪಠ್ಯಪುಸ್ತಕ ಕೊಟ್ಟು ತರಗತಿಗೆ ಬರಮಾಡಿಕೊಳ್ಳಲಾಯಿತು.
ಸತ್ಯನಾರಾಯಣಪೇಟೆಯ ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ಹಾಗೂ ಇಸಿಒ ಎಂ.ರೇವಣ್ಣ ಮಾತನಾಡಿ, ಶಾಲಾರಂಭದ ದಿನ ಆಗಮಿಸಿದ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕಗಳನ್ನು ವಿತರಿಸಿ, ಸಿಹಿಯೊಂದಿಗೆ ಬಿಸಿಯೂಟ ನೀಡಲಾಯಿತು. ಎಲ್‌ಕೆಜಿಯಿಂದ 1ನೇ ತರಗತಿಗಳಿಗೆ ಮೊದಲ ದಿನ ಹತ್ತು ಮಕ್ಕಳು ಪ್ರವೇಶ ಪಡೆದಿದ್ದಾರೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷೆ ಕಲಾವತಿ, ಸಹಶಿಕ್ಷಕರಾದ ಶಶಿಧರ ಅಕ್ಕಸಾಲಿ, ಜಿ.ಪಂಪಯ್ಯ, ಆರ್.ವಿರೂಪಾಕ್ಷಪ್ಪ, ಎಚ್.ಯಶೋದಾ, ಬಡಿಗೇರು ರತ್ನಮ್ಮ, ಕೆ.ಎಂ.ಮಂಜುಳಾ, ಎನ್.ಮಂಜುನಾಥ ಇತರರಿದ್ದರು.
ಫ್ಯಾಕ್ಟರಿಯ ಪಿಎಂಶ್ರೀ ಸಹಿಪ್ರಾ ಶಾಲೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಉಚಿತ ನೋಟ್‌ಪುಸ್ತಕ, ಗುಲಾಬಿ ಹೂ ನೀಡಿ ಬರಮಾಡಿಕೊಳ್ಳಲಾಯಿತು. ಮುಖ್ಯಶಿಕ್ಷಕ ಹನುಮಂತಪ್ಪ, ಎಸ್‌ಡಿಎಂಸಿ ಅಧ್ಯಕ್ಷ ರಾಮಲಿಂಗ, ಪ್ರಮುಖರಾದ ಬಿ.ಶೇಖರ್, ನಾಗರಾಜ, ಆದಿನಾರಾಯಣ, ಮರಿಯಸ್ವಾಮಿ ಇತರರಿದ್ದರು.