ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಬಿ.ಕುಲಕರ್ಣಿ ಗೇಟ್ ಅಳವಡಿಕೆ ಕಾಮಗಾರಿ ವೀಕ್ಷಿಸಿದರು. 
ವಿಜಯನಗರ

ಟಿಬಿಡ್ಯಾಂಗೆ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಭೇಟಿ

ಮಂಜುನಾಥ
ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ರಾಜ್ಯ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಬಿ.ಕುಲಕರ್ಣಿ ಭೇಟಿ ನೀಡಿದ ಕ್ರಸ್ಟ್ಗೇಟ್ ಕಾಮಗಾರಿ ವೀಕ್ಷಿಸಿದರು.
ಜಲಾಶಯದಲ್ಲಿ ಹಳೆಯ ಗೇಟ್‌ಗಳನ್ನು ತೆಗೆದು ಹೊಸ ಗೇಟ್‌ಗಳನ್ನು ಅಳವಡಿಸುವ ಕಾರ್ಯ ಚುರುಕುಗೊಂಡಿದೆ. ಜಲಾಶಯದ 33 ಗೇಟ್‌ಗಳಲ್ಲಿ 12 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದೆ. ಇನ್ನು 2, 25 ಮತ್ತು 26ನೇ ಸಂಖ್ಯೆಯ ಗೇಟ್‌ಗಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. 07 ಮತ್ತು 30ನೇ ಸಂಖ್ಯೆಯ ಹಳೆ ಗೇಟ್‌ಗಳನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.