ಕಾನಮಡುಗು ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ವಿದ್ವಾಂಸ ಡಾ. ಎ. ವೃಷಭೇಂದ್ರಾಚಾರ್ ಉದ್ಘಾಟಿಸಿದರು. ಪ್ರಮುಖರಾದ ಎನ್.ಎಂ. ರವಿಕುಮಾರ್, ಹೊಸತಿ ತಿಪ್ಪೇಸ್ವಾಮಿ, ಎಲ್.ಪಿ. ಸುಭಾಷ್‌ಚಂದ್ರ, ಡಾ. ಎ. ಕರಿಬಸಪ್ಪ ಇದ್ದರು. 
ವಿಜಯನಗರ

ಸಾಹಿತ್ಯಕ್ಕೆ ವಿಶ್ವಕರ್ಮ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ದತ್ತಿ ಉಪನ್ಯಾಸ ಕಾರ್ಯಕ್ರಮ

ಕಾನಹೊಸಹಳ್ಳಿ: ಜಗತ್ತಿಗೆ ಅಪೂರ್ವ ಶಿಲ್ಪಕಲೆಯನ್ನು ಕೊಡುಗೆಯಾಗಿ ನೀಡಿದ ವಿಶ್ವಕರ್ಮ ಸಮುದಾಯವು ಕನ್ನಡ ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಲ್ಲೂ ನೀಡಿದ ಕೊಡುಗೆ ಅತ್ಯಂತ ಅನನ್ಯ ಎಂದು ಇರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ್ ತಿಳಿಸಿದರು.

ಕಾನಮಡುಗು ಶರಣಬಸವೇಶ್ವರ ಡಿಎಲ್ ಇಡಿ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅಕ್ಕಸಾಲಿ ಹೂಲೆಮ್ಮ ಹಾಗೂ ನೀಲಕಂಠಾಚಾರಿ’ ಹೆಸರಿನ ದತ್ತಿ ವಿಷಯವಾದ ‘ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶ್ವಕರ್ಮರ ಕೊಡುಗೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಿರಿಯ ವಿದ್ವಾಂಸ ಡಾ. ಎ. ವೃಷಭೇಂದ್ರಾಚಾರ್ ಅವರು ತಮ್ಮ ತಂದೆ-ತಾಯಿಯವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ದತ್ತಿ ನಿಧಿ ನೀಡಿ ಸಾಹಿತ್ಯ ಮತ್ತು ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆಯನ್ನು ಸ್ಮರಿಸುವಂತೆ ಮಾಡಿರುವುದು ಶ್ಲಾಘನೀಯ ಎಂದರು.
‘ವೆಂಕಮ್ಮ ಹಾಗೂ ಎಚ್.ಕೆ. ರಾಮರಾವ್’ ಹೆಸರಿನ ದತ್ತಿ ವಿಷಯವಾದ ‘ಕುಮಾರವ್ಯಾಸ’ ಕುರಿತು ಕೆಂಚಮಲ್ಲನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ. ಎ. ಕರಿಬಸಪ್ಪ ಮಾತನಾಡಿದರು. ಕಾರ್ಯಕ್ರಮವನ್ನು ಹಿರಿಯ ವಿದ್ವಾಂಸ ಡಾ. ಎ. ವೃಷಭೇಂದ್ರಾಚಾರ್ ಉದ್ಘಾಟಿಸಿದರು. ಪ್ರಾಂಶುಪಾಲ ಎಲ್.ಪಿ. ಸುಭಾಷ್‌ಚಂದ್ರ ಮಾತನಾಡಿದರು. ಕಸಾಪ ಕಾನಹೊಸಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಎಸ್. ತಿಪ್ಪೇಸ್ವಾಮಿ, ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ಶ್ಯಾಮಸುಂದರ್ ಸಫಾರೆ, ಕೆಂಚಮಲ್ಲನಹಳ್ಳಿ ಶಂಕ್ರಪ್ಪ, ಶರಣನಗೌಡ, ಶಿಕ್ಷಕ ವೀರಭದ್ರಪ್ಪ ಹಾಗೂ ನಿವೃತ್ತ ಮುಖ್ಯಶಿಕ್ಷಕ ಆನಂದ ಉಪಸ್ಥಿತರಿದ್ದರು.