ವಿಶ್ವನಾಥ ಚ.ಹಿರೇಮಠ 
ವಿಜಯನಗರ

ವಿಕಾಸ ಬ್ಯಾಂಕ್‌ಗೆ 10.84 ಕೋಟಿ ಲಾಭ

ಹೊಸಪೇಟೆ: ಇಲ್ಲಿನ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ 2025–26 ಸಾಲಿನಲ್ಲಿ 2,148.96 ಕೋಟಿ ರೂ. ವ್ಯವಹಾರ ನಡೆಸಿದ್ದು, 10.84 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ತಿಳಿಸಿದರು.
ತಮ್ಮ ಬ್ಯಾಂಕ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಠೇವಣಿ ಸಂಗ್ರಹ 1,365.36 ಕೋಟಿ ರೂ. ತಲುಪಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.34ರಷ್ಟು ಹೆಚ್ಚುವರಿ ಠೆವಣಿವಾಗಿದೆ. ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿನ ತಲ್ಲಣಗಳೇ ಠೇವಣಿ ಹೆಚ್ಚಳಕ್ಕೆ ಕಾರಣ. ಸಾಲ ವಿತರಣೆ 783.60 ಕೋಟಿಗೆ ತಲುಪಿದೆ. ಎನ್‌ಪಿಎ ಪ್ರಮಾಣ ಶೇ 2.39ರಷ್ಟಿದೆ ಎಂದರು.
ಕಳೆದ ವರ್ಷಾಂತ್ಯದಲ್ಲಿ 2 ಸಾವಿರ ಕೋಟಿ ರೂ. ವ್ಯವಹಾರದ ಮೈಲಿಗಲ್ಲನ್ನು ಬ್ಯಾಂಕ್ ದಾಟಿದೆ. ಶೆಡ್ಯೂಲ್ ಬ್ಯಾಂಕ್ ಆಗುವ ನಿಟ್ಟಿನಲ್ಲಿ ಬ್ಯಾಂಕ್ ಈಗಾಗಲೇ ಅರ್ಹತೆ ಗಳಿಸಿಕೊಂಡಿದ್ದು, ಆರ್‌ಬಿಐ ಮಾನದಂಡಗಳAತೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಿದ ತಕ್ಷಣ ಶೆಡ್ಯೂಲ್ ಬ್ಯಾಂಕ್ ಸ್ಥಾನಮಾನಕ್ಕೆ ಹಕ್ಕು ಮಂಡಿಸಬಹುದಾಗಿದೆ. ದೇಶದಲ್ಲಿ ಕೇವಲ 51 ಬ್ಯಾಂಕ್‌ಗಳಿಗೆ ಮಾತ್ರ ಈ ಸ್ಥಾನಮಾನ ಲಭಿಸಿದ್ದು, ರಾಜ್ಯದಲ್ಲಿ ಈ ಸಾಧನೆ ಮಾಡಿದ ಒಂದೂ ಬ್ಯಾಂಕ್ ಸದ್ಯ ಇಲ್ಲ ಎಂದರು.
ಬ್ಯಾAಕ್‌ನ ಸಲಹೆಗಾರರಾದ ವಿ.ಜೆ.ಕುಲಕರ್ಣಿ, ಚಂದಾ ಹುಸೇನ್, ನಿರ್ದೇಶಕರಾದ ಅನಂತ ಜೋಶಿ, ನವ್ಯಶ್ರೀ ಹಿರೇಮಠ, ರಾಘವೇಂದ್ರ, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಇದ್ದರು.