ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ವಿವಿಧ ಬೇಡಿಕೆ ಈಡೇರಿಕೆಗೆ ಪ್ರಜಾ ಜಾಗೃತಿ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು. ವೇದಿಕೆ ಅಧ್ಯಕ್ಷ ಯು.ಆಂಜನೇಯಲು, ಪ್ರಧಾನ ಕಾರ್ಯದರ್ಶಿ ವೈ.ಯಮುನೇಶ್, ಎ.ಪಂಪಣ್ಣ, ಎ.ಜಗನ್ನಾಥ, ಭೀಮಪ್ಪ, ನೀಲಕಂಠಪ್ಪ ಇತರರಿದ್ದರು. 
ವಿಜಯನಗರ

ವಿಜಯನಗರ ಜಿಲ್ಲಾಡಳಿತ ಭವನ ನಿರ್ಮಿಸಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಪ್ರಜಾ ಜಾಗೃತಿ ವೇದಿಕೆಯಿಂದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ
ಹೊಸಪೇಟೆ: ವಿಜಯನಗರ ಜಿಲ್ಲಾಡಳಿತ ಭವನ ಸೇರಿದಂತೆ ಇತರೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಪ್ರಜಾ ಜಾಗೃತಿ ವೇದಿಕೆಯಿಂದ ನಗರದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ವಿಜಯನಗರ ಜಿಲ್ಲೆ ರಚನೆಯಾಗಿ 5 ವರ್ಷ ಕಳೆದರೂ, ಜಿಲ್ಲಾ ಕೇಂದ್ರದಲ್ಲಿ ಅಗತ್ಯವಾಗಿರುವ ಮೂಲಸೌಲಭ್ಯಗಳೂ ಇಲ್ಲದೇ ನೂತನ ಜಿಲ್ಲೆಯ ರಚನೆಯ ಮೂಲ ಉದ್ದೇಶವೆ ವಿಫಲವಾಗಿದೆ. ಜಿಲ್ಲಾ ಕೇಂದ್ರಕ್ಕೆ ಸಂಬAಧಿಸಿದ ಕೆಲವು ಕಚೇರಿಗಳು ಇನ್ನೂ ಬಳ್ಳಾರಿಯಲ್ಲಿವೆ. ಜಿಲ್ಲಾ ಖನಿಜ ನಿಧಿ (ಡಿ.ಎಂ.ಎಫ್), ಕರ್ನಾಟಕ ಗಣಿಬಾದಿತ ಪ್ರದೇಶ ಪುನಶ್ಚೇತನ ನಿಗಮದ ಗಣಿ ಸಂಪನ್ಮೂಲಗಳ ಸಮರ್ಪಕವಾಗಿ ಸದ್ಬಳಕೆಯಾಗುತ್ತಿಲ್ಲ. ಬಜೆಟ್ ಅನುದಾನ ಹಂಚಿಕೆಯಲ್ಲಿ ಜಿಲ್ಲೆಗೆ ಅನ್ಯಾಯ ಹಾಗೂ ಪಕ್ಷಪಾತ ಮಾಡಲಾಗಿದೆ ಎಂದು ಆಗ್ರಹಿಸಿದರು.
ನೂತನ ಜಿಲ್ಲೆಗೆ ಸಂಬAಧಿಸಿದ ಎಲ್ಲಾ ಕಚೇರಿಗಳನ್ನು ಕೂಡಲೇ ಆರಂಭಿಸ ಬೇಕು. ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಇಲಾಖೆಗಳು ಒಂದೇ ಕಡೆ ಇರುವಂತೆ ಜಿಲ್ಲಾಡಳಿತ ಭವನ ನಿರ್ಮಾಣ ಆಗಬೇಕು. ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್ ಕಾಲೇಜ್, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಹಾಗೂ ಉದ್ಯೋಗ ಆಧಾರಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಂಜೂರಾಗುವ ಅನುದಾನದ ಸದ್ಬಳಕೆ ಮತ್ತು ಅಭಿವೃಧ್ದಿ ಯೋಜನೆಗಳಲ್ಲಿ ಗುಣಮಟ್ಟ ಮತ್ತು ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಕೇಂದ್ರದಲ್ಲಿ ಮೂಲಸೌಕರ್ಯಗಳ ಅಭಿವೃಧ್ದಿಗೆ ಡಿಎಂಎಫ್, ಕೆಎಂಇಆರ್‌ಸಿ ಹಾಗೂ ಕೆಕೆಆರ್‌ಡಿಬಿಯಿಂದ ಹೆಚ್ಚುವರಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೇದಿಕೆ ಅಧ್ಯಕ್ಷ ಯು.ಆಂಜನೇಯಲು, ಪ್ರಧಾನ ಕಾರ್ಯದರ್ಶಿ ವೈ.ಯಮುನೇಶ್, ಎ.ಪಂಪಣ್ಣ, ಎ.ಜಗನ್ನಾಥ, ಭೀಮಪ್ಪ, ನೀಲಕಂಠಪ್ಪ, ವಿಶ್ವನಾಥ, ಎಚ್.ತಿಪ್ಪೇಸ್ವಾಮಿ, ಶಿವಾನಂದ ಕೌತಾಳ್, ಎಂ.ನಾಗಲಿAಗಪ್ಪ, ಎಂ.ಬಿ.ಗೌಡಣ್ಣನವರ್, ಎ.ಬಿ.ಬಸವರಾಜ, ಎಂ.ಶAಕ್ರಪ್ಪ, ಕೆ.ವಿ.ರಾಮಾಲಿ, ಎಸ್.ಎಂ.ಬಾಷಾ, ಇ.ಪ್ರಶಾಂತ ಇತರರಿದ್ದರು.