ಕೂಡ್ಲಿಗಿಯಲ್ಲಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಅಧ್ಯಕ್ಷತೆಯಲ್ಲಿ ಬಸವ ಜಯಂತಿ ಪೂರ್ವಭಾವಿ ಸಭೆ ನಡೆಯಿತು.  
ವಿಜಯನಗರ

20ರಂದು ವೀರಶೈವ ಭವನದ ಫಲಕ ಅನಾವರಣ

ಕೂಡ್ಲಿಗಿ: ಬಸವ ಜಯಂತಿಯನ್ನು ಏ.20 ರಂದು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ 50 ಕ್ಕೂ ಹೆಚ್ಚು ಜೋಡೆತ್ತಿನ ಮೆರವಣಿಗೆಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡುವರು. ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ವಿವಿಧ ಮಂಗಲವಾದ್ಯಗಳ ಮೂಲಕ ಮೆರವಣಿಗೆ ನಡೆಯಲಿದ್ದು, ಪಪ್ಪಿ ಲೇ ಔಟ್‌ನಲ್ಲಿ ಸಮಾರೋಪಗೊಳ್ಳಲಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸುನೀಲ್ ಗೌಡ ಅವರ ಆಶಯದಂತೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ವೀರಶೈವ ಸಮುದಾಯ ಭವನ ನಿವೇಶನದ ಫಾರ್ಮ್ ನಂ.3 ನೀಡುವರು. ನಂತರ ವೀರಶೈವ ಭವನದ ಫಲಕ ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.
ಸಮಾನತೆಯ ಹರಿಕಾರ ಶ್ರೀ ಬಸವೇಶ್ವರ ಕುರಿತು ಉಪನ್ಯಾಸ ನೀಡಲಾಗುವುದು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರನ್ನು ಸನ್ಮಾನ ಮಾಡಲಾಗುವುದು. ಪಟ್ಟಣದ ಎಲ್ಲ ವೃತ್ತಗಳಿಗೆ ವಿದ್ಯುತ್ ದೀಪ ಅಲಂಕಾರ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ್, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಹೊಂಬಾಳೆ ರೇವಣ್ಣ, ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸುನೀಲ್ ಗೌಡ, ಗ್ಯಾರಂಟಿ ಯೋಜನೆ ಸಮಿತಿಯ ಜಿಲಾನ್, ಬ್ಯಾಳಿ ವಿಜಯಕುಮಾರ್ ಗೌಡ, ಮರುಳಸಿದ್ದಪ್ಪ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಎಸ್.ಸುರೇಶ್, ಬಂಡೆ ರಾಘವೇಂದ್ರ, ಸೂರ್ಯ ಪ್ರಕಾಶ್, ತುಪ್ಪಳ್ಳಿ ಮೂಗಣ್ಣ, ಮಂಜುನಾಥ, ಬ್ಯಾಳಿ ಪ್ರಸಾದಗೌಡ, ಕೆ.ಎಸ್.ವೀರೇಶ್, ಸಿ.ಬಿ.ಜಯರಾಂ ನಾಯಕ, ಕಂಪ್ಲಿ ಬಸವರಾಜ, ನಂದಿ ಬಸವರಾಜ ಇತರರಿದ್ದರು.