ಮೆಟ್ರಿ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಇ-ಪೌತಿ ಆಂದೋಲನ ಕಾರ್ಯಕ್ರಮದಲ್ಲಿ ಆರ್‌ಐ ವೈ.ಎಂ.ಜಗದೀಶ್ ಮಾತನಾಡಿದರು. ತಹಸೀಲ್ದಾರ್ ಜೂಗಲ ಮಂಜುನಾಯಕ, ಗ್ರಾಮ ಆಡಳಿತಾಧಿಕಾರಿ ಕೆ.ಎಂ.ಶಿವರುದ್ರಯ್ಯ, ಹೊಸಕೋಟೆ ಜಗದೀಶ್, ಹೊನ್ನಳ್ಳಿ ಗಂಗಾಧರ, ಹೊನ್ನಳ್ಳಿ ಶಿವಪುತ್ರಪ್ಪ ಇತರರಿದ್ದರು.  
ವಿಜಯನಗರ

ಇ-ಪೌತಿ ಸೇವೆ ಬಳಸಿಕೊಳ್ಳಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಜೂಗಲ ಮಂಜುನಾಯಕ ಸಲಹೆ
  • ಕಂಪ್ಲಿ ಇ-ಪೌತಿ ಆಂದೋಲನ ಪಿಂಚಣಿ ಅದಾಲತ್‌
ಕಂಪ್ಲಿ: ಜಮೀನಿನ ಮೂಲ ಮಾಲೀಕರು ಮರಣ ಹೊಂದಿದ್ದರೆ, ಅವರ ಹೆಸರಿನಲ್ಲಿರುವ ಆಸ್ತಿಯನ್ನು ಕಾನೂನುಬದ್ಧ ವಾರಸುದಾರರ ಹೆಸರಿಗೆ ವರ್ಗಾಯಿಸುವ (ಪೌತಿ)ಆಂದೋಲನದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ತಿಳಿಸಿದರು.
ಮೆಟ್ರಿ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಇ-ಪೌತಿ ಆಂದೋಲನ ಹಾಗೂ ಪಿಂಚಣಿ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದರು. ಅಗತ್ಯ ದಾಖಲೆಗಳನ್ನು ಒದಗಿಸಿ, ಕುಟುಂಬದ ಸದಸ್ಯರೆಲ್ಲರೂ ಒಮ್ಮತದ ನಿರ್ಧಾರದಿಂದ ಇ-ಪೌತಿ ಖಾತೆ ಮಾಡಿಸಿಕೊಳ್ಳಬಹುದಾಗಿದೆ. ಇದರಿಂದ ಕಚೇರಿಗೆ ಅಲೆಯುವುದು ತಪ್ಪಲಿದೆ ಎಂದರು.
ಮೆಟ್ರಿ ಗ್ರಾಮದಲ್ಲಿ 29 ಪೌತಿ ಅರ್ಜಿ ಸ್ವೀಕರಿಸಿದ್ದು, 11 ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಪೌತಿ ಖಾತೆಗೆ ಅಳವಡಿಸಲಾಯಿತು. ಉಳಿದ 18 ಅರ್ಜಿಗಳೊಂದಿಗೆ ಮರಣ ಪ್ರಮಾಣಪತ್ರ ಇಲ್ಲದಿದ್ದರಿಂದ ಮಹಜರು ಮಾಡುವುದಾಗಿ ತಿಳಿಸಿದರು.
ಗ್ರಾಪಂ.ಅಧ್ಯಕ್ಷೆ ನಾಗಮ್ಮ ನಾಗರಾಜ, ಕಂದಾಯ ನಿರೀಕ್ಷಕ ವೈ.ಎಂ. ಜಗದೀಶ್, ಗ್ರಾಮ ಆಡಳಿತಾಧಿಕಾರಿ ಕೆ.ಎಂ.ಶಿವರುದ್ರಯ್ಯ, ಪ್ರಮುಖರಾದ ಹೊಸಕೋಟೆ ಜಗದೀಶ್, ಹೊನ್ನಳ್ಳಿ ಗಂಗಾಧರ, ಹೊನ್ನಳ್ಳಿ ಶಿವಪುತ್ರಪ್ಪ, ಸಿ.ಡಿ.ಮಹದೇವ ಇತರರಿದ್ದರು.