ಹುಲಿಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ, ಹಾಗೂ ಪುಸ್ತಕ ವಿತರಣೆ ಮಾಡಲಾಯಿತು. ಬಿಇಒ ಎಚ್.ಲೇಪಾಕ್ಷಪ್ಪ, ತಾಪಂ ಮಾಜಿ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ, ಗ್ರಾಪಂ ಸದಸ್ಯರಾದ ಟಿ ಹಾಲೇಶ್, ಅಂಗಡಿ ಇಮಾಮ್ ಸಾಹೇಬ್, ಜೋಗಪ್ಪರ ಪರಸಪ್ಪ, ಭೋವಿ ವೀರೇಶ, ಅಂಗಡಿ ಮೆಹಬೂಬ್ ಸಾಬ್ ಇತರರಿದ್ದರು. 
ವಿಜಯನಗರ

ಸಮವಸ್ತ್ರ ವಿತರಣೆ

ಪ್ರಮುಖ ಮುಖ್ಯಾಂಶಗಳು

  • ತಳಿರು-
  • ತೋರಣ
  • ಶಾಲೆಗಳಿಗೆ
ಹರಪನಹಳ್ಳಿ: ಬೇಸಿಗೆ ರಜೆ ಬಳಿಕ ತಾಲೂಕಿನಾದ್ಯಂತ ಸೋಮವಾರ ಶೈಕ್ಷಣಿಕ ವರ್ಷದ ತರಗತಿಗಳನ್ನು ಪ್ರಾರಂಭಗೊಳಿಸಲಾಯಿತು.
ಶಿಕ್ಷಣ ಇಲಾಖೆಯ ಆದೇಶದನ್ವಯ ತಾಲೂಕಿನ ಎಲ್ಲ ಶಾಲೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು.
ಮಕ್ಕಳನ್ನು ಸಂಭ್ರಮ ಸಡಗರದಿಂದ ಸ್ವಾಗತಿಸುವ ಮುನ್ನ ಶಾಲೆಗಳಿಗೆ ತಳಿರು-ತೋರಣಗಳನ್ನು ಹಾಕಿ, ರಂಗೋಲಿಯಿಂದ ವಿಭಿನ್ನವಾಗಿ ಸಿಂಗರಿಸಿ ಮಕ್ಕಳಿಗೆ ಹೂಗುಚ್ಚ ಹಾಗೂ ಸಿಹಿ ತಿನಿಸು ನೀಡುವ ಮೂಲಕ ಸ್ವಾಗತಿಸಲಾಯಿತು.