ಒನಕೆ ಓಬವ್ವ ಉತ್ಸವಕ್ಕಾಗಿ ಗುಡೇಕೋಟೆಯಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಿರುವುದು.
ಕಾನಹೊಸಹಳ್ಳಿ: ಗುಡೇಕೋಟೆಯಲ್ಲಿ ಜ.31ರಂದು ಸಂಜೆ ಆರಂಭವಾಗಲಿರುವ ಎರಡು ದಿನಗಳ ಐತಿಹಾಸಿಕ ಒನಕೆ ಓಬವ್ವ ಉತ್ಸವಕ್ಕೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಆಹ್ಮದ್ ಖಾನ್ ಚಾಲನೆ ನೀಡಲಿದ್ದಾರೆ.
ಉತ್ಸವಕ್ಕೂ ಮುನ್ನ ಗ್ರಾಮದ ಶಿವಪಾರ್ವತಿ ದೇವಸ್ಥಾನದಿಂದ ಜನಪದ ವಾಹಿನಿ ಆರಂಭವಾಗಲಿದ್ದು, ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡುವರು, ವಾಹಿನಿಯಲ್ಲಿ ನಾಡಿನ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಕಾರ್ಯಕ್ರಮ ಉದ್ಘಾಟನೆ ನಂತರ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ತಂಡ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಾಮಿಡಿ ಕಿಲಾಡಿ ತಂಡದಿಂದ ಹಾಸ್ಯ ಕಾರ್ಯಕ್ರಮ ಹಾಗು ಡಿಕೆಡಿ ತಂಡದಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರವಾಸೋದ್ಯೊಮ ಸಚಿವ ಎಚ್.ಕೆ.ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಸಂಸದ ಈ.ತುಕಾರಾಮ್, ಶಾಸಕರಾದ ಎಚ್.ಆರ್.ಗವಿಯಪ್ಪ, ಎಲ್.ಕೃಷ್ಣನಾಯ್ಕ, ಬಿ.ದೇವೇಂದ್ರಪ್ಪ, ಕೆ.ನೇಮಿರಾಜ್ ನಾಯ್ಕ, ಎಂ.ಪಿ.ಲತಾ ಮಲ್ಲಿಕಾರ್ಜುನ, ಡಾ.ಚಂದ್ರಶೇಖರ್ ಬಿ.ಪಾಟೀಲ್, ವೈ.ಎಂ.ಸತೀಶ್, ಶಶೀಲ್ ಜಿ.ನಮೋಶಿ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಭಾಗವಹಿಸುವರು.
ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತಸಾಗರ ಸ್ವಾಮೀಜಿ, ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮುಡಿ ಶರಣಾರ್ಯರು, ಶ್ರೀ ಸಿದ್ದಯ್ಯನಕೋಟೆ ಚಿತ್ತರಿಗಿ ಶಾಖಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಿವೃತ್ತ ಉಪ ಲೋಕಾಯುಕ್ತ ನ್ಯಾಯಮೂರ್ತಿ ಪತ್ರಿಬಸನಗೌಡ, ಖ್ಯಾತ ಸಾಹಿತಿ ಬಿ.ಎಲ್.ವೇಣು, ಗುಡೇಕೋಟೆ ಪಾಳೇಗಾರ ವಂಶಸ್ಥ ಶಿವರಾಜ್ ವರ್ಮ, ಒನಕೆ ಓಬವ್ವ ವಂಶಸ್ಥ ರಾಜಣ್ಣ, ಜರಿಮಲೆ ಪಾಳೇಗಾರರ ವಂಶಸ್ಥ ಕೃಷ್ಣವರ್ಮ ರಾಜು, ಸಿದ್ದಪ್ಪನಾಯಕ ಉಪಸ್ಥಿತರಿರುವರು.
ವಿಶೇಷ ಅಥಿತಿಗಳಾಗಿ ಮಾತಾ ಮಂಜಮ್ಮ ಜೋಗತಿ, ಸರ್ಕಾರದ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ್, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೊಹಮದ್ ಆಲಿ ಅಕ್ರಮ್ ಶಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಟಿ.ಎಚ್.ಎಂ. ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ, ಎಸ್ಪಿ ಎಸ್.ಜಾಹ್ನವಿ ಭಾಗವಹಿಸುವರು.