ಹಂಪಿನಕಟ್ಟಿ ಬಳಿ ಬುಧವಾರ ಆಂಬು ಲೆನ್ಸ್ ನಲ್ಲಿ ಶಕೀಲಾ ಜನ್ಮ ನೀಡದ ಅವಳಿ ಮಕ್ಕಳೊಂದಿಗೆ ತುರ್ತು ಆರೋಗ್ಯ ಸಿಬ್ಬಂದಿ ಜೆ.ಅನಿಲ್ ಕುಮಾರ್, ಆಶಾಕಾರ್ಯಕರ್ತೆ ಗಂಗಮ್ಮ, ವಾಹನ ಚಾಲಕ ಭಾಷ ಇದ್ದರು. 
ವಿಜಯನಗರ

ಆಂಬುಲೆನ್ಸ್ ನಲ್ಲಿ ಅವಳಿ ಮಕ್ಕಳ ಜನನ

ಹೊಸಪೇಟೆ: ಆಂಬು ಲೆನ್ಸ್ ನಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ತಾಲೂಕಿನ ಹಂಪಿನಕಟ್ಟಿಯಲ್ಲಿ ಬುಧವಾರ ನಡೆದಿದೆ.


ಹಂಪಿನಕಟ್ಟಿ ನಿವಾಸಿ ಶಕೀಲಾ ಎಂಬ ಮಹಿಳೆಯೇ ಅವಳಿ ಮಕ್ಕಳಿಗೆ ಜನ್ಮನೀಡಿದ ತಾಯಿ ಆಗಿದ್ದಾರೆ. ಬುಧವಾರ ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಗ್ರಾಮದಿಂದ ನಗರದ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಅವಳಿ ಮಕ್ಕಳ ಜನನವಾಗಿದೆ. ತುರ್ತು ಆರೋಗ್ಯ ಸಿಬ್ಬಂದಿ ಜೆ.ಅನಿಲ್ ಕುಮಾರ್ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಇಪ್ಪತು ನಿಮಿಷದ ಅಂತರದಲ್ಲಿ ಎರಡು ಮಕ್ಕಳ ಜನನವಾಗಿದೆ. ತಾಯಿ ಮಕ್ಕಳು ಸುರಕ್ಷಿತವಾಗಿದ್ದಾರೆ.