ಹೊಸಪೇಟೆ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ನಡೆದ ಕಾರ್ಮಿಕರ ಸಂಘಟನಾ ಕಾರ್ಯಾಗಾರದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯುದರ್ಶಿ ಎಸ್.ವರಲಕ್ಷಿö್ಮÃ ಮಾತನಾಡಿದರು. ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ಕುಪ್ಪುಸ್ವಾಮಿ, ಕಾರ್ಮಿಕ ಮುಖಂಡರಾದ ಆರ್.ಎಸ್.ಬಸವರಾಜ, ಬಿ.ವಿ.ರಾಘವೇಂದ್ರ, ರೇವಪ್ಪ, ಸಪ್ನ, ಕೆ.ಎಂ.ಸAತೋಷ್ ಕುಮಾರ್, ಎ.ಕರುಣಾನಿಧಿ ಇತರರಿದ್ದರು. 
ವಿಜಯನಗರ

ಸಾರಿಗೆ ನೌಕರರಿಗೆ ಒಗ್ಗಟ್ಟಿ ಮಂತ್ರ ಅಗತ್ಯ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಸಿಐಟಿಯು ರಾಜ್ಯ ಪ್ರಧಾನ ಕಾರ್ಯುದರ್ಶಿ ಎಸ್.ವರಲಕ್ಷ್ಮೀ ಕರೆ
ಹೊಸಪೇಟೆ: ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಒಗ್ಗಟ್ಟಿನಿಂದ ಹೋರಾಡಿ ಪಡೆಯಬೇಕಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯುದರ್ಶಿ ಎಸ್.ವರಲಕ್ಷಿö್ಮÃ ಎಚ್ಚರಿಸಿದರು.
ಅಖಿಲ ಭಾರತ ರಸ್ತೆ ಸಾರಿಗೆ ನೌಕರರ ಒಕ್ಕೂಟ (ಎಐಆರ್‌ಟಿಡಬ್ಲ್ಯುಎಫ್)ದಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಭಾನುವಾರ ಆಯೋಜಿಸಿದ ಎರಡು ದಿನಗಳ ಕಾರ್ಮಿಕರ ರಾಜ್ಯಮಟ್ಟದ ಸಂಘಟನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸನ್ನದುಗಳಿಗೆ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಿದ್ದು, ಮೇ 9ರಿಂದ ದೇಶದಲ್ಲಿ ಕಾರ್ಮಿಕರಿಗೆ ಕರಾಳ ದಿನ ಆರಂಭವಾದAತಾಗಿದೆ. ಇದರ ವಿರುದ್ಧ ಈಗಲಾದರೂ ಸಂಘಟಿತ ಹೋರಾಟ ನಡೆಸದಿದ್ದರೆ ಪ್ರತಿಯೊಬ್ಬರಿಗೆ ಅಪಾಯ ತಪ್ಪಿದ್ದಲ್ಲ ಎಂದರು.
ಹೊಸ ನಿಯಮಗಳು ಹಲವು ಬಗೆಯಲ್ಲಿ ಕಾರ್ಮಿಕರಿಗೆ ಅವರ ಹಕ್ಕುಗಳನ್ನು ವಂಚಿಸಲಿವೆ. ಇಎಸ್‌ಐ, ಪಿಎಫ್ ಸೌಲಭ್ಯ ದೊರಕದಂತೆ ಮಾಡಲಿದೆ. ಕಾಯಂ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳದಂತಹ ವಾತಾವರಣ ಸೃಷ್ಟಿಸಿದೆ. ಎಂಟು ಗಂಟೆ ಬದಲಿಗೆ 12 ಗಂಟೆ ಕೆಲಸ ಇನ್ನು ಕಡ್ಡಾಯವಾಗಲಿದೆ, ಮಹಿಳೆಯರು ಸಹ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಲಿದೆ. ಕಾರ್ಮಿಕ ನ್ಯಾಯಾಲಯವೇ ನಿರ್ಮೂಲನಗೊಳ್ಳಲಿದೆ. ಕಾರ್ಮಿಕ ನಿರೀಕ್ಷಕರ ಹುದ್ದೆಗಳು ರದ್ದಾಗಲಿವೆ. ಕಾರ್ಮಿಕ ಸಂಘಟನೆಗಳಿಗೆ ಹೊಡೆತ ಬೀಳಲಿದೆ. ಒಟ್ಟಾರೆ ಈ ಸನ್ನದು ಕಾರ್ಮಿಕರ ಪಾಲಿಗೆ ಮರಣಶಾಸನವೇ ಆಗಿದೆ ಎಂದರು.
ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಆಟೊ ಗ್ಯಾಸ್, ಸಿಎನ್‌ಜಿ , ಎಲ್‌ಎನ್‌ಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರ ನೇರ ಹೊಡೆತ ಆಟೊ, ಟ್ಯಾಕ್ಸಿ ಚಾಲಕರಿಗೆ ಆಗಿದೆ. ಹೀಗಾಗಿ ಕೋವಿಡ್ ಸಮಯದಲ್ಲಿ ನೀಡಿದಂತಹ ಒಂದಿಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಸರ್ಕಾರ ಸಾರಿಗೆ ಸಿಬ್ಬಂದಿಗೆ ನೀಡಬೇಕು ಎಂದರು.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಹಿತ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ 2024ರ ಜನವರಿ 1ರಿಂದಲೇ ಆಗಬೇಕಿತ್ತು, ಒಂದು ವರ್ಷದ ರಿಯಾಯಿತಿ ನೀಡಿದ ಮೇಲೆಯೂ ಇನ್ನೂ ತನಕ ಪರಿಷ್ಕರಣೆ ಆಗಿಲ್ಲ. ಈ ಸಾರಿಗೆ ಸಿಬ್ಬಂದಿಯ ಹೋರಾಟಕ್ಕೆ ಸಿಐಟಿಯುನಿಂದ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.