ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಸ.ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಕೂಡಲೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ಬಿಇಒ ಪ್ರಭಾಕರಗೆ ಗ್ರಾಮದ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ಹಗರಿಬೊಮ್ಮನಹಳ್ಳಿ: ಹಂಪಾಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಬಿಇಒ ಪ್ರಭಾಕರಗೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ಪ್ರಮುಖ ಬಂಟರ ಕುಬೇರ ಮಾತನಾಡಿ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಜಜ್ಜೂರಿ ಉಮೇಶ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ದ್ವಾರಕೇಶ ಅವರ ಅನುಚಿತ ವರ್ತನೆಯಿಂದ, ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದರಿಂದ ಪಾಲಕರು ಬೇಸತ್ತಿದ್ದಾರೆ. ಆದ್ದರಿಂದ ಈ ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು. ಎಂದು ಆರೋಪಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ವಿ.ಹನುಮಂತ ಮಾತನಾಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಭಾರ ಮುಖ್ಯ ಶಿಕ್ಷಕ ಜಜ್ಜೂರಿ ಉಮೇಶ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ದ್ವಾರಕೇಶರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ್, ಗ್ರಾಪಂ ಸದಸ್ಯ ಬಿ.ನಾಗರಾಜ್, ನವೋದಯ ಯುವಕ ಸಂಘದ ಅಧ್ಯಕ್ಷ ಉಪ್ಪಾರ್ ಹನುಮಂತ, ಪ್ರಮುಖ ಬಂಟರ ಸೋಮಣ್ಣ, ಹಳೇ ವಿದ್ಯಾರ್ಥಿಗಳಾದ ಸೇರಗಾರ್ ಸೋಮನಾಥ್, ತಳವಾರ್ ರಾಮು, ಸೀಗೇನಹಳ್ಳಿ ಚಂದ್ರು, ಸಿ.ಪ್ರಹ್ಲಾದ್, ಸೀಗೆನಹಳ್ಳಿ ಬಸವರಾಜ, ಎಚ್.ಹನುಮಂತ, ತೀರ್ಥಪ್ರಸಾದ್, ಎಚ್.ಅಶೋಕ್, ಪತ್ರಿ ಯಲ್ಲಪ್ಪ, ಸೀಗೇನಹಳ್ಳಿ ಮಾರುತಿ, ಸೋಮನಾಥ ಭಜಂತ್ರಿ, ಬಿ.ಸೋಮು ಇತರರಿದ್ದರು.