ಹೊಸಪೇಟೆ ತಾಲೂಕಿನ ಕಮಲಾಪುರದ ಸರ್ಕಾರಿ ಪ್ರೌಢಾ ಶಾಲೆ 
ವಿಜಯನಗರ

ಎಸ್ಸೆಸ್ಸೆಲ್ಸಿಗೆ ಮೂರು ಪೂರ್ವ ಸಿದ್ಧತೆ ಪರೀಕ್ಷೆ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿAದ ಸಿದ್ದತೆ
  • ಆರಂಭವಾದ ಮೊದಲ ಎಕ್ಸಾಮ್
ಹೊಸಪೇಟೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಿರಂತರ ಮೂರು ಪೂರ್ವಸಿದ್ಧತಾ ಪರೀಕ್ಷೆಗಳ ಪರ್ವ ಆರಂಭಗೊAಡಿದೆ. ಮಾರ್ಚ್ ತಿಂಗಳಲ್ಲಿ ಜರುಗುವ ವಿದ್ಯಾರ್ಥಿಗಳು ಈ ಬಾರಿ ಮೂರು ಪೂರ್ವ ಸಿದ್ಧತಾ ಎಸ್ಸೆಸ್ಸೆಲ್ಸಿ ಬೋರ್ಡ್ ಪರೀಕ್ಷೆಗಾಗಿ ಪರೀಕ್ಷೆಗಳನ್ನು ಎದುರಿಸಬೇಕಾಗಿದೆ.
ಹಿಂದಿನ ವರ್ಷಗಳಲ್ಲಿ ಬೋರ್ಡ್ ನಿಂದ ಒಂದು ಪೂರ್ವಸಿದ್ದತಾ ಪರೀಕ್ಷೆ ಮಾತ್ರ ನಡೆಸಲಾಗುತ್ತಿತ್ತು. ಈ ಬಾರಿ ಮೂರು ಪರೀಕ್ಷೆಗಳನ್ನು ಬೋರ್ಡ್ ಆಯೋಜಿಸುತ್ತಿದೆ. ಕಳೆದ ವರ್ಷದ ಕಡಿಮೆ ಫಲಿತಾಂಶವನ್ನು ಉತ್ತಮಪಡಿಸುವ ಉದ್ದೇಶದಿಂದ, ಶಿಕ್ಷಣ ಇಲಾಖೆ ಮೊದಲ ಬಾರಿಗೆ ಬೋರ್ಡ್ ಮಟ್ಟದ ಮೂರು ಪೂರ್ವಸಿದ್ದತಾ ಪರೀಕ್ಷೆಗಳನ್ನು ನಡೆಸಲು ಯೋಜನೆ ರೂಪಿಸಿದ್ದು, ಮೊದಲ ಪೂರ್ವಸಿದ್ದತಾ ಪರೀಕ್ಷೆ ಸೋಮವಾರದಿಂದ ಆರಂಭವಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆ ಎಸ್ ಇಎ ಬಿ) ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ ಮಂಡಳಿಯ ಶಾಲೆಗಳ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ಆಯಾ ಮುಖ್ಯಶಿಕ್ಷಕರು ತಮ್ಮ ದೂರವಾಣಿಯಲ್ಲಿನ ಒಟಿಪಿ ಬಳಸಿಕೊಂಡು ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಂದಿನ ಪರೀಕ್ಷೆಯ ಪತ್ರಿಕೆಗಳು ಅಂದು ಬೆಳಗ್ಗೆ 7 ಗಂಟೆಗೆ ಮುದ್ರಣ ಮಾಡಿಕೊಳ್ಳಬೇಕಾಗಿದೆ. ಪ್ರತಿಶಾಲೆಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗಿದೆ. ಇದರಿಂದ ಪ್ರಶ್ನೆ ಪತ್ರಿಕೆ ಬಹಿರಂಗವಾದರೆ ಸಂಬAಧಿಸಿದ ಶಾಲೆಯನ್ನು ಹೊಣೆಗಾರರನ್ನಾಗಿಸಲಾಗುವುದು. ಇದೇ ಮಾದರಿಯನ್ನು ಮೂರು ಪೂರ್ವಸಿದ್ದತಾ ಪರೀಕ್ಷೆಗಳಿಗೆ ವಿಸ್ತರಿಸಲಾಗಿದೆ.
ಈಗಾಗಲೇ ಇಲಾಖೆಯಲ್ಲಿ ಸಾಕಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ರೂಪಣಾತ್ಮಕ ಮೌಲ್ಯಮಾಪನ(ಎಫ್ ಎ) (ಫಾರ್ಮೇಟಿವ್ ಅಸೆಸ್‌ಮೆಂಟ್) ಎನ್ನುವ ಹೆಸರಿನಲ್ಲಿ ವರ್ಷ ದಲ್ಲಿ ನಾಲ್ಕು ಪರೀಕ್ಷೆಗಳನ್ನು ನಡೆಸಲಾಗುವುದು. ಇದರ ಜತೆಗೆ ಸಂಕಲಾತ್ಮಕ ಮೌಲ್ಯಮಾಪನ(ಎಸ್) (ಸಮೇಟಿವ್ ಅಸೆಸ್ ಮೆಂಟ್) ಹೆಸರಿನಲ್ಲಿ ಎರಡು ಪರೀಕ್ಷೆಗಳನ್ನು ನಡೆಸಲಾಗುವುದು. ಎಲ್ ಬಿಎ(ಹತ್ಯಾಧಾರಿತ ವಿಶ್ಲೇಷಣೆ) ಎನ್ನುವ ಹೊಸ ಪದ್ಧತಿಯನ್ನು ಪ್ರಸಕ್ತ ಸಾಲಿನಿಂದ ಜಾರಿಗೊಳಿಸಲಾಗಿದೆ. ಇದರಂತೆ ಶಿಕ್ಷಕರು ಪ್ರತಿ ಅಧ್ಯಾಯಕ್ಕೆ ಒಂದು ಟೆಸ್ಟ್ಗಳನ್ನು ಕೈಗೊಳ್ಳಬೇಕು. ಇವುಗಳ ಜತೆಗೆ ಶಿಕ್ಷಕರು ಪ್ರತಿ ಪಾಠ ಅಥವಾ ಘಟಕಗಳ ಅಂತ್ಯದಲ್ಲಿ ಕಿರು ಪರೀಕ್ಷೆಗಳನ್ನು ನಿರ್ವಹಿಸುತ್ತಾರೆ.

ಪ್ರಯೋಜನವೇನು

ಹಿಂದುಳಿದ ಮತ್ತು ಕಲಿಕೆಯಲ್ಲಿ ನಿಧಾನಗತಿಯ ವಿದ್ಯಾರ್ಥಿಗಳಿಗೆ ಸತತ ಪರೀಕ್ಷೆಗಳಿಂದ ಅನುಕೂಲವಾಗಲಿದೆ. ಪರೀಕ್ಷೆಯ ನಂತರ ಬೋರ್ಡ್ ವತಿಯಿಂದ ಕೀ ಉತ್ತರಗಳನ್ನು ಒದಗಿಸಲಿದೆ. ಇದರಿಂದ ಫೇಲಾದ ಮತ್ತು ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಭ್ಯಾಸದಲ್ಲಿ ತೊಡಗಿಸುವುದಕ್ಕೆ ಶಿಕ್ಷಕರಿಗೆ ಅನುಕೂಲವಾಗಲಿದೆ.

ಬಿಗಿ ವ್ಯವಸ್ಥೆಯಲ್ಲಿ ಪರೀಕ್ಷೆ

ಮುರು ಪೂರ್ವ ಸಿದ್ದತಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಹೊಸ ರೀತಿಯ ವ್ಯವಸ್ಥೆಯಲ್ಲಿ ಜರುಗಲಿವೆ. ಮೊದಲ ಪರೀಕ್ಷೆ ಶಾಲೆಗಳಲ್ಲಿಯೇ ನಡೆಯಲಿದೆ. ಎರಡು ಮತ್ತು ಮೂರನೇ ಪರೀಕ್ಷೆಗಳು ಬೋರ್ಡ್ ಪರೀಕ್ಷೆ ಜರುಗುವ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿವೆ. ಎರಡು ಮತ್ತು ಮೂರನೇ ಪರೀಕ್ಷೆ ವೆಬ್ ಕಾಸ್ಟಿಂಗ್ ಅಡಿಯಲ್ಲಿ ಜರುಗಲಿವೆ. ಬದಲಾಗಿರುವ ಪಾಸಿಂಗ್ ಅಂಕವ್ಯವಸ್ಥೆ, ಮೂರು ಪರೀಕ್ಷೆಗಳಿಂದ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸುವ ನಿರೀಕ್ಷೆಯನ್ನು ಇಲಾಖೆ ಹೊಂದಿದೆ.
"

ಎರಡು ಮತ್ತು ಮೂರನೇ ಎಸ್ಸೆಸ್ಸೆಲ್ಸಿ ಪೂರ್ವಸಿದ್ದತಾ ಪರೀಕ್ಷೆಗಳಿಗೆ ವೆಬ್ ಕಾಸ್ಟಿಂಗ್ ಅಳವಡಿಸಲಾಗುವುದು. ಈ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆ ಬರೆಯುವ ಆಯಾ ಕೇಂದ್ರಗಳಲ್ಲಿಯೇ ನಡೆಸುವುದರಿಂದ ಪರೀಕ್ಷೆಯ ಭಯ ನಿವಾರಣೆಯಾಗಲಿದೆ. ಜತೆಗೆ ಪರೀಕ್ಷಾ ಕೇಂದ್ರ ಪರಿಚಯವಾಗಲಿದೆ.