ಕನ್ನಡ ವಿವಿಯ ದೃಶ್ಯಕಲಾ ವಿಭಾಗದಲ್ಲಿ ಗುರುವಾರ ನಡೆದ ಸೃಜನೋತ್ಸವ ಚಿತ್ರಕಲಾ ಪ್ರದರ್ಶನ ಹಾಗೂ ಶಿಬಿರದಲ್ಲಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿದರು. ಕಲಾವಿದ ಬಿ.ಮಾರುತಿ, ದೃಶ್ಯಕಲಾ ವಿಭಾಗದ ಮುಖ್ಯಸ್ಥ ಡಾ.ಮೋಹನ್‌ರಾವ್ ಬಿ.ಪಂಚಾಳ, ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಇತರರಿದ್ದರು. 
ವಿಜಯನಗರ

ಮನುಷ್ಯತ್ವ ಮೂಡಿಸುವುದೇ ನಿಜವಾದ ಕಲೆ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯ
ಹೊಸಪೇಟೆ: ಪ್ರಸ್ತುತ ಸಮಾಜದಲ್ಲಿ ಭಾವನೆ ರಹಿತ ಜೀವನದತ್ತ ಸಾಗುತ್ತಿದ್ದು, ಒಬ್ಬ ಕಲಾವಿದನು ತನ್ನ ಕಲಾಕೃತಿಗಳ ಮೂಲಕ ವ್ಯಕ್ತಿಯ ಮನಸ್ಸಿನಲ್ಲಿ ಮನುಷ್ಯತ್ವ, ಭಾವನೆ ಮತ್ತು ಸಂಬAಧಗಳ ಅರಿವು ಮೂಡಿಸಬಲ್ಲನು ಎಂದು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಭಿಪ್ರಾಯಪಟ್ಟರು.
ವಿಶ್ವಕಲಾ ದಿನಾಚರಣೆ ನಿಮಿತ್ತ ಕನ್ನಡ ವಿವಿಯ ದೃಶ್ಯಕಲಾ ವಿಭಾಗದಲ್ಲಿ ಗುರುವಾರ ನಡೆದ ಸೃಜನೋತ್ಸವ ಚಿತ್ರಕಲಾ ಪ್ರದರ್ಶನ ಹಾಗೂ ಶಿಬಿರದಲ್ಲಿ ಮಾತನಾಡಿದರು. ಸೃಜನಶೀಲತೆ ಎನ್ನುವುದು ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡರೆ ಕಲಾವಿದನಿಂದ ಹೊರಹೊಮ್ಮುವ ಕಲೆ ಹೊಸತನದಿಂದ ಕೂಡಿರುತ್ತದೆ ಎಂದರು.
ಹಿAದಿನ ಕಾಲದಲ್ಲಿ ಚಿತ್ರಕಲೆ ಸೀಮಿತ ಬಣ್ಣಗಳಲ್ಲಿ ಮೂಡಿಬರುತ್ತಿದ್ದರೆ, ಈಗ ಬಣ್ಣಗಳು ಅಪಾರ ಪ್ರಮಾಣದಲ್ಲಿವೆ. ಅವು ಗೊಂದಲವನ್ನುAಟು ಮಾಡುವ ಮಟ್ಟಿಗೆ ಇವೆ. ನಿಜವಾದ ಕಲಾವಿದನು ಅಮೂರ್ತ ಕಲೆಯಲ್ಲಿ ಪರಿಣತಿ ಸಾಧಿಸಿ, ತನ್ನ ಭಾವನೆಗಳನ್ನು ರೇಖೆ ಮತ್ತು ಬಣ್ಣಗಳ ಮೂಲಕ ಪರಿಣಾಮಕಾರಿಯಾಗಿ ವ್ಯಕ್ತಪಡಿಸಬೇಕು. ಅಮೂರ್ತ ಕಲೆ ವ್ಯಕ್ತಿಯ ಮನಸ್ಸಿನಲ್ಲಿ ಭಾವನೆಗಳನ್ನು ಹುಟ್ಟಿಸುವುದು ಅವನು ಹೊಂದಿರುವ ಸಂಸ್ಕಾರ ಮತ್ತು ಅನುಭವಗಳ ಆಧಾರದ ಮೇಲೆ ನಡೆಯುತ್ತದೆ. ಕಲಾವಿದರು ತಮ್ಮದೇ ಚಿತ್ರಕಲೆಯ ಮೊದಲ ವಿಮರ್ಶಕರಾಗಿರಬೇಕು ಎಂದರು.
ಕಲಾವಿದ ಬಿ.ಮಾರುತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾನ್ ವ್ಯಕ್ತಿಗಳ ಶಿಲ್ಪಗಳನ್ನು ಮಾಡಿಸಿ ಜಾತಿಗೆ ಸೀಮಿತವಾಗಿಸುವ ಸಂಕುಚಿತ ಮನೋಭಾವ ಬೆಳೆಯುತ್ತಿದೆ. ವಿದೇಶಗಳಲ್ಲಿ ಕಲೆ ಹಾಗೂ ಪರಿಸರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಆದರೆ ನಮ್ಮಲ್ಲಿ ಹಬ್ಬಗಳ ನೆಪದಲ್ಲಿ ನದಿಗಳು ಹಾಗೂ ಪರಿಸರ ಹಾನಿಗೊಳಗಾಗುತ್ತಿರುವುದು ದುಃಖಕರವಾಗಿದೆ. ಸಮಾಜದಲ್ಲಿ ಕಲೆಯನ್ನು ರಕ್ಷಿಸುವ ಪ್ರಜ್ಞೆ ಬೆಳೆಯಬೇಕು. ಸಂಗೀತ, ನಾಟಕ, ಸಾಹಿತ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕಲಾವಿದರ ಅಗತ್ಯವಿದೆ. ಕಲಾ ಕ್ಷೇತ್ರದಲ್ಲಿ ಭಾಷೆ, ಜಾತಿ, ಧರ್ಮ ಅಥವಾ ವರ್ಣಭೇದವಿಲ್ಲ. ಹಲವಾರು ಕಲಾವಿದರಲ್ಲಿ ಇನ್ನೂ ಸಂಕುಚಿತ ಮನೋಭಾವವಿದ್ದು, ಅದರಿಂದ ಹೊರಬರಬೇಕಾಗಿದೆ ಎಂದರು.