ಕಮಲಾಪುರದ ಶ್ರೀ ನಗರೇಶ್ವರ ದೇಗುಲದ ರಥೋತ್ಸವ ಸೋಮವಾರ ಸಂಜೆ ಅದ್ದೂರಿಯಾಗಿ ಜರುಗಿತು. 
ವಿಜಯನಗರ

ಅದ್ದೂರಿ ಶ್ರೀ ನಗರೇಶ್ವರ ರಥೋತ್ಸವ

ಹೊಸಪೇಟೆ: ತಾಲೂಕಿನ ಕಮಲಾಪುರದ ಶ್ರೀ ನಗರೇಶ್ವರ ದೇಗುಲದ ರಥೋತ್ಸವ ಸೋಮವಾರ ಸಂಜೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ದೇಗುಲದಲ್ಲಿ ಅರ್ಯವಶ್ಯ ಸಮಾಜದಿಂದ ಬೆಳಗ್ಗೆಯಿಂದ ಹಲವು ಅಭಿಷೇಕ, ವಿಶೇಷ ಪೂಜಾಕೈಕರ್ಯಗಳು ನಡೆದವು. ಕಮಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ದೇಗುಲದಲ್ಲಿ ವಿಶೇಷ ಪೂಜೆ ಮಾಡಿಸಿ ದೇವರ ದರ್ಶನ ಪಡೆದರು. ಬೆಳಗ್ಗೆ ಮಡಿತೇರಿನ ಪೂಜಾ ಕಾರ್ಯ ನಡೆಯಿತು. ಸಂಜೆ ಆಗುತ್ತಿದ್ದಂತೆ ಭಕ್ತರ ರಥವನ್ನು ಎಳೆದರು. ಭಕ್ತರು ಬಾಳೆಹಣ್ಣನ್ನು ರಥಕ್ಕೆ ಎಸೆಯುವ ಮೂಲಕ ಸಂಕಲ್ಪ ಈಡೇರಿಕೆಗೆ ಪ್ರಾರ್ಥಿಸಿದರು.