ಹೊಸಪೇಟೆಯಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿAದ ಪ್ರತಿಭಟನೆ ನಡೆಯಿತು. ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ.ಪ್ರಮೋದ್, ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ಗೌರಮ್ಮ, ಪ್ರಮುಖರಾದ ಮಂಗಳಾ, ಮಹೇಶ್ವರಿ, ಚೆನ್ನಮ್ಮ, ನಾಗಮ್ಮ, ಸ್ಪೂರ್ತಿ, ಗೌರಿ ಇತರರಿದ್ದರು. 
ವಿಜಯನಗರ

ಆಶಾ ಕಾರ್ಯಕರ್ತೆಯರ ಬೇಡಿಕೆ ಸರ್ಕಾರ ಈಡೇರಿಸಲಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿAದ ಡಿಎಚ್ಒ ಕಚೇರಿ ಮುಂದೆ ಪ್ರತಿಭಟನೆ
ಹೊಸಪೇಟೆ : ಬಾಕಿ ಇರುವ 5 ತಿಂಗಳ ಇನ್ಸೆಂಟಿವ್ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ) ನೇತೃತ್ವದಲ್ಲಿ ಸೋಮವಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಡಾ.ಪ್ರಮೋದ್ ಮಾತನಾಡಿ, ರಾಜ್ಯಾದ್ಯಂತ ನಡೆದ ಹೋರಾಟದ ಫಲವಾಗಿ 260 ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ ವಿಜಯನಗರ ಜಿಲ್ಲೆಗೆ 5.6 ಕೋಟಿ ರೂ. ನಿಗದಿಯಾಗಿದೆ. ಆದರೆ, ತಾಂತ್ರಿಕ ದೋಷದ ನೆಪವೊಡ್ಡಿ ಆಶಾ ಕಾರ್ಯಕರ್ತೆಯರಿಗೆ ಹಣ ತಲುಪಿಸದಿರುವುದು ಖಂಡನೀಯ. ಶಾಲೆಗಳು ಆರಂಭವಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಕೆಎಸ್.ಗೌರಮ್ಮ ಮಾತನಾಡಿ, ಆಶಾ ಪೋರ್ಟಲ್‌ನಲ್ಲಿ ವಾರದ ಲಸಿಕಾ ಕಾರ್ಯಕ್ರಮ ಸೇರಿದಂತೆ 9 ಪ್ರಮುಖ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಇನ್ಸೆಂಟಿವ್ ಕಡಿತಗೊಳಿಸಿದೆ. ಈ ಆದೇಶ ವಾಪಸ್ ಪಡೆಯುವವರೆಗೂ ಆಶಾಗಳು ಈ 9 ಚಟುವಟಿಕೆಗಳನ್ನು ಸ್ಥಗಿತಗೊಳಿಸಲಿದ್ದಾರೆ ಎಂದರು.
ಡಿಎಚ್ಒ ಡಾ. ಶಂಕರ್ ನಾಯ್ಕ ಅವರು ಮನವಿ ಸ್ವಿಕರಿಸಿ, ಮುಂದಿನ 2 ದಿನಗಳಲ್ಲಿ 2 ತಿಂಗಳ ಇನ್ಸೆಂಟಿವ್ ಹಣ ಹಾಗೂ ಉಳಿದ ಮೊತ್ತವನ್ನು 15-20 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಅವರು, 9 ಚಟುವಟಿಕೆಗಳ ನಿಷ್ಕ್ರಿಯತೆಯ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.