ಇಇ ಖಲಂದರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷ ಖಲಂದರ್, ಜಿಲ್ಲಾ ಉಪಾಧ್ಯಕ್ಷ ಆರ್.ಆರ್.ತಾಯಪ್ಪ, ಪ್ರಮುಖರಾದ ದೊಡ್ಡ ಗಾಳೆಪ್ಪ, ರೇವಣ ಸಿದ್ದಪ್ಪ, ಕೆ.ಮೂರ್ತಿ ಇತರರಿದ್ದರು. 
ವಿಜಯನಗರ

ವಿದ್ಯುತ್ ಖಾಸಗೀಕರಣ ಸರ್ಕಾರ ಕೈಬಿಡಲಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಉಗ್ರ ಹೋರಾಟದ ಎಚ್ಚರಿಕೆ
ಹೊಸಪೇಟೆ: ರಾಜ್ಯದಲ್ಲಿ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ಮತ್ತು ಖಾಸಗಿ ಪವರ್ ಕಂಪನಿಗೆ ಪರವಾನಿಗೆ ನೀಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ವಿವಿಧ ಅಧಿಕಾರಿಗಳ ಮೂಲಕ ಆಕ್ಷೇಪಣಾ ಮನವಿ ಪತ್ರವನ್ನು ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಟಿ.ನಾಗರಾಜ್ ಮಾತನಾಡಿ, ಖಾಸಗಿ ಪವರ್ ಕಂಪನಿಗೆ ಪರವಾನಿಗೆ ನೀಡುವುದು ರೈತರ ಪಂಪ್‌ಸೆಟ್‌ಗಳಿಗೆ ಮಾರಕವಾಗಲಿದ್ದು, ಗೃಹ ಬಳಕೆಯ ಗ್ರಾಹಕರಿಗೂ ಹೊರೆಯಾಗಲಿದೆ. ಅಲ್ಲದೆ, ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚಲಿದ್ದು, ಮೀಸಲಾತಿ ವ್ಯವಸ್ಥೆಗೂ ತೊಂದರೆಯುAಟಾಗಲಿದೆ. ಒಂದು ವೇಳೆ ಜಿಲ್ಲಾ ಉಪಾಧ್ಯಕ್ಷರಾದ ಆರ್.ಆರ್. ತಾಯಪ್ಪ, ಪ್ರಮುಖರಾದ ದೊಡ್ಡ ಗಾಳೆಪ್ಪ, ರೇವಣ ಸಿದ್ದಪ್ಪ, ಕೆ. ಮೂರ್ತಿ ಹಿಂದೆ ಸರಿಯದಿದ್ದರೆ, ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡುವುದರ ಜತೆಗೆ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ‘ಬಾರು ಕೋಲು ಚಳುವಳಿ’ ನಡೆಸಲಾಗುವುದು ಎಂದು ಎಚ್ಚರಿಸಿದೆ.
ಜಿಲ್ಲಾ ಉಪಾಧ್ಯಕ್ಷ ಆರ್.ಆರ್. ತಾಯಪ್ಪ, ಪ್ರಮುಖರಾದ ದೊಡ್ಡ ಗಾಳೆಪ್ಪ, ರೇವಣ ಸಿದ್ದಪ್ಪ, ಕೆ. ಮೂರ್ತಿ, ಅಯ್ಯಣ್ಣ, ಮಹಾರುದ್ರ, ಗಂಟೆ ಬಸವರಾಜ, ಗಾದಿಲಿಂಗಪ್ಪ, ಸತೀಶ್, ರಾಮಾಂಜನಿ ಹಾಗೂ ಸಾಗರ್ ಇತರರಿದ್ದರು.