ಹೊಸಪೇಟೆ ಶ್ರೀ ವಡಕರಾಯಸ್ವಾಮಿ ಹಾಗೂ ಶ್ರೀ ರಂಗನಾಥಸ್ವಾಮಿಗಳ ರಥೋತ್ಸವ ಶುಕ್ರವಾರ ಶ್ರದ್ಧಾ ಭಕ್ತಯಿಂದ ಜರುಗಿತು. 
ವಿಜಯನಗರ

ಸಂಭ್ರಮದ ವಡಕರಾಯ ರಥೋತ್ಸವ

ಹೊಸಪೇಟೆ: ಪೌರಾಣಿಕ ಹಿನ್ನೆಲೆ ಹಾಗೂ ಪುರಾತನ ದೇಗುಲಗಳಲ್ಲಿ ಒಂದಾದ ಮತ್ತು ನಗರದ ಆರಾಧ್ಯ ದೈವವೂ ಆಗಿರುವ ಶ್ರೀ ವಡಕರಾಯಸ್ವಾಮಿ ಹಾಗೂ ಶ್ರೀ ರಂಗನಾಥಸ್ವಾಮಿಗಳ ರಥೋತ್ಸವ ಶುಕ್ರವಾರ ಶ್ರದ್ಧಾ ಭಕ್ತಯಿಂದ ಜರುಗಿತು.
ನಗರದ ಗ್ರಾಮ ದೈವವಾಗಿಯು ಪೂಜಿಸಲ್ಪಡುವ ದೇವರುಗಳ ರಥೋತ್ಸವದಲ್ಲಿ ಬಹುತೇಕ ಏಳುಕೇರಿಗಳ ಭಕ್ತವೃಂದ ರೈತ ಬಾಂಧವರು ಮತ್ತು ವಾಣಿಜೋದ್ಯಮಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆಯಿಂದಲೇ ರಥೋತ್ಸವ ಹೊರಡುವ ಮುಖ್ಯ ಬೀದಿಯಲ್ಲಿ ಬಾಳಿ ಕಂಬಗಳನ್ನು ತಳಿರು ತೋರಣ ಹಾಗೂ ರ‍್ಮಿಕ ಧ್ವಜಗಳು ಕಟ್ಟುವ ಮೂಲಕ ರಸ್ತೆಯುದ್ದಕ್ಕೂ ಹಬ್ಬದ ವಾತಾವರಣ ರ‍್ಮಾಣ ಮಾಡಲಾಯಿತು. ದೇಗುಲದಲ್ಲಿ ರ‍್ಮಿಕ ರ‍್ಯಕ್ರಮಗಳಾದ ಅಭಿಷೇಕ, ಕುಂಕುರ‍್ಚನೆ, ತಳಸಿ ರ‍್ಚನೆ, ಕ್ಷೀರಾಭಿಷೇಕ, 10-30ಕ್ಕೆ ರಥಾಂಗಹೋಮ, 11ಗಂಟೆಗೆ ಮಡಿತೇರು ಹೀಗೆ ರ‍್ಮಿಕ ವಿಧಿಗಳಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು.
ರಥೋತ್ಸವ ನಿಮಿತ್ತ ಊರಿ ಬಿಸಿಲಲ್ಲ ಆಗಮಿಸಿದ ಭಕ್ತರಿಗೆ ತಂಪು ಪಾನಕ ನೀಡುವ ಮೂಲಕ ಸಂಘಸAಸ್ಥೆಗಳು ಸೇವೆ ರ‍್ಪಿಸಿದವು. ಶ್ರೀ ವಡಕರಾಯ ಧ್ವಜವನ್ನು 2.25 ಲಕ್ಷ ರೂಪಾಯಿಗಳಿಗೆ ಹಾಗೂ ಶ್ರೀ ರಂಗನಾಥಸ್ವಾಮಿಯ ಧ್ವಜವನ್ನು 80 ಸಾವಿರ ರೂಪಾಯಿಗಳಿಗೆ ಹರಾಜು ಮಾಡಿದ ನಂತರ ರಥೋತ್ಸವ ಸಾಂಪ್ರದಾಯಿಕ ವಾದ್ಯಗಳು ಸಾಂಪ್ರದಾಯಿಕ ಕಲಾಪ್ರಕಾರಗಳು ಮತ್ತು ಭಕ್ತರ ಹೂವು-ಹಣ್ಣುಗಳನ್ನು ಏಸೆಯುವ ಮೂಲಕ ಭಕ್ತಿ ರ‍್ಪಿಸಿ ರಥೋತ್ಸವವನ್ನು ಯಶಸ್ವಿಗೊಳಿಸಿದರು. ದೇಗುಲದಿಂದ ಎದುರು ಆಂಜನೇಯ ಪಾದಗಟ್ಟಿಯವರೆಗೂ ಭಕ್ತರ ಜೈ ಘೋಷಣೆಯ ಸಂಭ್ರಮ ಮುಗಿಲುಮುಟ್ಟಿತು.