ಹೊಸಪೇಟೆಯಲ್ಲಿ ಜಿಲ್ಲಾಕ್ರಿಡಾಂಗಣದಲ್ಲಿ ಯುವಕರ ಹೋಳಿ ಸಂಭ್ರಮ
- ಹೊಸಪೇಟೆಯಲ್ಲಿ ಯುವಕರ ಸಂಭ್ರಮ
ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ ಹೋಳಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು ಯುವಕರು, ಮಕ್ಕಳು ಮತ್ತು ಮಹಿಳೆಯರು ಬಿಸಲು ಕೂಡ ಲೆಕ್ಕಿಸದೇ ಬಣ್ಣದೋಕುಳಿಯಲ್ಲಿ ಮಿಂದೆದ್ದರು.
ಹೋಳಿ ಹುಣ್ಣಿಮೆ ಪ್ರಯುಕ್ತ ಸೋಮವಾರ ರಾತ್ರಿ ಕಾಮಣ್ಣನ ಮೂರ್ತಿ ದಹಿಸಿದರು. ಗ್ರಹಣದ ಕಾರಣದಿಂದ ಮಂಗಳವಾರ ಬದಲಾಗಿ ಬುಧವಾರ ಬಣ್ಣದೋಕುಳಿಯಲ್ಲಿ ತೆರೆದುಕೊಂಡಿತು. ಇನ್ನು ನಗರದ ಜಿಲ್ಲಾಕ್ರೀಡಾಂಗಣದಲ್ಲಿ ಶಾಸಕ ಶಾಸಕ ಎಚ್.ಆರ್.ಗವಿಯಪ್ಪ ನೇತೃತ್ವದಲ್ಲಿ ಆಯೋಜಿಸಿದ್ದ ಬಣ್ಣದೋಕುಳಿಯನ್ನು ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದ ಆರಂಭಿಸಿದರು. ಉರಿಬಿಸಿಲು ಲೆಕ್ಕಿಸದೆ ಯುವ ಸಮೂಹ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಮಧ್ಯಾಹ್ನ ಕಿಕ್ಕಿರಿದು ಸೇರಿದ್ದ ಯುವಜನರು ನಾನಾ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮದಲ್ಲಿ ತೇಲಿದರು. ಇನ್ನು ಬಡವಾಣೆಗಳಲ್ಲಿ ಹಲಗೆ, ತಮಟೆ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ, ಬಣ್ಣ ಎರಚುತ್ತ ಸಂಭ್ರಮಿಸಿದರು.