ಹೊಸಪೇಟೆ ತಹಸೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ಸಿಪಿಐಎಂನಿಂದ ಪ್ರತಿಭಟನೆ ನಡೆಯಿತು. ಕಾರ್ಯದರ್ಶಿ ಎನ್ ಯಲ್ಲಾಲಿಂಗ, ಪ್ರಮುಖರಾದ ಆರ್.ಭಾಸ್ಕರ್ ರೆಡ್ಡಿ , ಎಂ.ಗೋಪಾಲ, ಕೆ.ಎಂ.ಸ್ವಪ್ನ, ಕೆ.ನಾಗರತ್ನಮ್ಮ, ವಿ.ಸ್ವಾಮಿ, ಈ.ಮಂಜುನಾಥ, ಎಂ.ಜಂಬಯ್ಯನಾಯಕ, ರಮೇಶ್ ಕುಮಾರ್, ಶಕುಂತಲಮ್ಮ, ಎಸ್.ಯಲ್ಲಮ್ಮ, ಹೇಮಂತ್ ನಾಯ್ಕ ಇತರರಿದ್ದರು. 
ವಿಜಯನಗರ

ಬಡವರಿಗೆ ರಕ್ತ ಹಿರುತ್ತಿದೆ ಕೇಂದ್ರ ಸರ್ಕಾರ

ಪ್ರಮುಖ ಮುಖ್ಯಾಂಶಗಳು

  • ಸಿಪಿಐಎಂನಿಂದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ
ಹೊಸಪೇಟೆ: ಪೆಟ್ರೋಲ್, ಡಿಸೇಲ್ ಬೆಲೆಯೇರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ ವಾದಿ (ಸಿಪಿಐಎಂ) ತಾಲೂಕು ಸಮಿತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು.
ಜಾಗತಿಕ ಬಿಕ್ಕಟ್ಟಿನಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ 12 ವರ್ಷದ ಆಡಳಿತದ ಅವಧಿಯಲ್ಲಿ ಇನ್ನಷ್ಟು ದೇಶ ದಿವಾಳಿಯಾಗಿದೆ. ಸಾರ್ವಜನಿಕ ರಂಗಗಳನ್ನು ಕಾರ್ಪೋರೇಟ್ ವಲಯದ ಬಂಡವಾಳದಾರರಿಗೆ ಮಾರಾಟ ಮಾಡಿ ಅನುಕೂಲಕರ ವಾತಾವರಣ ನಿರ್ಮಿಸಿ ಅದಾನಿ, ಅಂಬಾನಿಯವರು ಬ್ಯಾಂಕ್ ಗಳಲ್ಲಿ ಪಡೆದ ಲಕ್ಷಾಂತರ ಕೋಟಿಗಳನ್ನು ಮನ್ನಾ ಮಾಡಿಸಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾದಾಗ ಬೆಲೆ ಇಳಿಸದೇ ಜಾಸ್ತಿ ಆದ ಸಂದರ್ಭಗಳಲ್ಲಿ ಹೆಚ್ಚಿಸಿ ಕೆಲವೇ ಶ್ರೀಮಂತರಿಗೆ ಕೋಟ್ಯಾಂತರ ರೂಪಾಯಿ ಲಾಭ ಗಳಿಸಲು ಅವಕಾಶ ಕಲ್ಪಿಸುವ ಮೂಲಕ ಬಡವರ ಮೇಲೆ ಬರೆ ಎಳೆಯಲು ಮುಂದಾಗಿದ್ದಾರೆ. ಇಂಧನ ಮತ್ತು ಕಚ್ಚಾ ತೈಲ ಬೆಲೆ ಹೆಚ್ಚಳದಿಂದಾಗಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ತಲುಪಿವೆ ಇದರಿಂದಾಗಿ ಬಡ ಮಧ್ಯಮ ವರ್ಗದ ಕುಟುಂಬದ ಸಾಮಾನ್ಯ ಜನರು ಕೊಂಡುಕೊಳ್ಳಲಾಗದ ಸ್ಥಿತಿಗೆ ಬಂದಿದ್ದಾರೆ ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಶಿಕ್ಷಣ, ಆರೋಗ್ಯ,ಉದ್ಯೋಗ ಸುಧಾರಣೆಗೆ ಮುಂದಾಗದೇ ಕೋಮುದ್ವೇಷಭಾಷಣ, ಕಾರ್ಮಿಕ ವಿರೋಧಿ ಕಾನೂನುಗಳು ಬೆಲೆಯೇರಿಕೆ ಇನ್ನೂ ಮುಂತಾದ ಜನವಿರೋಧಿ ನೀತಿಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಸ್ವಾಮ್ಯದ ಅನುದಾನದ ಯೋಜನೆಗಳಲ್ಲಿ ತಮ್ಮ ಸಚಿವ ಸಂಪುಟ ವ್ಯಾಪಕ ಭ್ರಷ್ಟಾಚಾರ ನಡೆಸಿ ಲೂಟಿ ಮಾಡಲು ಸಹಾಯ ಹಸ್ತ ನೀಡುತ್ತಿದ್ದಾರೆ.
ಒಟ್ಟಾರೆಯಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಜನಸಾಮಾನ್ಯರ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.