ಕೊಟ್ಟೂರು ಶ್ರೀ ಬಿಕ್ಕಿ ಮರಡಿ ದುರ್ಗಮ್ಮ ದೇವಿ ರಥೋತ್ಸವ ಅಪಾರ ಜನಸ್ತೋಮದ ನಡುವೆ ಅದ್ದೂರಿಯಾಗಿ ಜರುಗಿತು. 
ವಿಜಯನಗರ

ಅದ್ಧೂರಿಯಾಗಿ ಜರುಗಿದ ಬಿಕ್ಕಿ ಮರಡಿ ರಥೋತ್ಸವ

ಕೊಟ್ಟೂರು : ಪಟ್ಟಣದ ಕೆರೆ ಏರಿಯಾ ಮೇಲಿರುವ ಆಗಿ ಹುಣ್ಣಿಮೆ ದಿನವಾದ ಇಂದು ಶ್ರೀ ಬಿಕ್ಕಿ ಮರಡಿ ದುರ್ಗಮ್ಮ ದೇವಿ ರಥೋತ್ಸವ ಅಪಾರ ಜನಸ್ತೋಮದ ನಡುವೆ ಅದ್ದೂರಿಯಾಗಿ ಜರುಗಿತು.
ಶ್ರೀ ದೇವಿಯ ಈ ವರ್ಷದ ಪಟಾಕ್ಷಿ ಹರಾಜು ರೂ 52,101 ರೂಪಾಯಿಗಳಿಗೆ ಕೊಮರಪ್ಪನವರ ಷಣ್ಮುಖಪ್ಪ ತಮ್ಮದಾಗಿಸಿಕೊಂಡು ದೇವ ಕೃಪೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ತಂಡೋಪ ತಂಡವಾಗಿ ಬಂದ ಕೊಟ್ಟೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಭಕ್ತಾದಿಗಳು ಬಂದು ಈ ಅದ್ದೂರಿ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ಬಿಕ್ಕಿ ಮರಡಿ ದುರ್ಗಮ್ಮ ದೇವಿಯ ಕೃಪೆಗೆ ಪಾತ್ರರಾದರು