ಹೊಸಪೇಟೆಯಲ್ಲಿ ಶುಕ್ರವಾರ ಬಿಡಿಸಿಸಿ ಬ್ಯಾಂಕಿನ 106ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮಾಚರಣೆಯಲ್ಲಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಮಾತನಾಡಿದರು.  
ವಿಜಯನಗರ

ಎಲ್ಲರ ಸಹಕಾರದಿಂದ ಬ್ಯಾಂಕ್ ಸದೃಡ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಬಿಡಿಸಿಸಿ ಬ್ಯಾಂಕ್ 106ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಅಭಿಪ್ರಾಯ

ಹೊಸಪೇಟೆ: ಯಾವುದೇ ಸಂಸ್ಥೆ ಅಭಿವೃದ್ಧಿಗೆ ಗ್ರಾಹಕರು, ನಿರ್ದೇಶಕರು, ಸಿಬ್ಬಂದಿಗಳು ಸಹಕಾರದಿಂದ ಅಭಿವೃದ್ಧಿ ಆಗಲು ಸಾದ್ಯ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.

ಬಿಡಿಸಿಸಿ ಬ್ಯಾಂಕಿನ 106ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನೌಕರರಿಗೆ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬಿಡಿಸಿಸಿ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಉನ್ನತ ಸ್ನಾನದಲ್ಲಿದೆ. ಹಲವು ಪ್ರಶಸ್ತಿ ಗಳುಕೂಡ ಲಭಿಸಿವೆ. ಪ್ರತಿಯೊಬ್ಬರ ಸಹಕಾರದಿಂದ ಬ್ಯಾಂಕ್ ಇಷ್ಟೊಂದು ಅಭಿವೃದ್ಧಿ ಆಗಿದೆ. ಇನ್ನು ಗುಡೆಕೊಟೆ, ಕೊಟ್ಟೂರು, ತೆಲಗಿ, ಹಗರಿಬೊಮ್ಮನಹಳ್ಳಿ, ತಂಬ್ರೆಳ್ಳೆ, ಉತ್ತಂಗಿ, ಜೂರನೂರಿ, ಎಮ್ಮಿಗನೂರು, ಚಿಗಟೇರಿ ಒಟ್ಟು 9 ಹೊಸ ಶಾಖೆಗಳನ್ನು ತೆರೆಯಲು ಆರ್ ಬಿಐಯಿಂದ ಅನುಮತಿ ಸಿಕ್ಕಿದೆ. ಇದೇ ರೀತಿಯಲ್ಲಿ ಮುಂದೆ ಕೂಡ ಬ್ಯಾಂಕಿನ ಗ್ರಾಹಕರು ಹಾಗೂ ಸದಸ್ಯ ಸಹಕಾರಿ ಸಂಘಗಳಿಗೆ ಮತ್ತಷ್ಟು ಉತ್ತಮ ಸೇವೆ ನೀಡಿ. ಬ್ಯಾಂಕನ್ನು ಮತ್ತಷ್ಟು ಸದೃಡಗೊಳಿಸೋಣ ಎಂದು ಕರೆಕೊಟ್ಟರು.

ಬ್ಯಾಂಕ್ ಸಿಇಒ ಬಿ.ಜಯಪ್ರಕಾಶ್, ಪ್ರಮುಖರಾದ ಎಂ.ಕೊಟ್ರೇಶಪ್ಪ, ಡಿ.ಶಂಕರ್, ಕೆ.ಪಿ.ಉಮಾಪತಿ, ತಿಮ್ಮರೆಡ್ಡಿ,ಮರಿಸ್ವಾಮಿ, ಕುಮಾರ ಸ್ವಾಮಿ ಇತರರಿದ್ದರು.