- 105 ಟಿಎಂಸಿಯಿಂದ 102ಕ್ಕೆ ಇಳಿಕೆ ?
- ತ್ರಿವಳಿ ರಾಜ್ಯಗಳಲ್ಲಿ ಆತಂಕ ಸೃಷ್ಟಿ
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಲಕ್ಷಾಂತರ ರೈತ ಕುಟುಂಬಗಳ ಪಾಲಿನ ಕಾಮಧೇನು, ತುಂಗಭದ್ರಾ ಜಲಾಶಯದ ಒಡಲು ಬರಿದಾಗುತ್ತಿದೆಯೇ? ಹೀಗೊಂದು ಭೀಕರ ಅನುಮಾನ ಈಗ ಮೂರೂ ರಾಜ್ಯಗಳ ರೈತರಲ್ಲಿ ನಡುಕ ಹುಟ್ಟಿಸಿದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯವು 105.788 ಟಿಎಂಸಿಯಿಂದ 102 ಟಿಎಂಸಿಗೆ ಕುಸಿಯುವ ಸಾಧ್ಯತೆಯಿದೆ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲುೃಸಿ) ತಜ್ಞರು ವ್ಯಕ್ತಪಡಿಸಿರುವ ಶಂಕೆ ಈಗ ಕೃಷಿಕರ ನಿದ್ದೆಗೆಡಿಸಿದೆ.
2024ರ ಆ.10ರಂದು 19ನೇ ಕ್ರಸ್ಟ್ಗೇಟ್ ಸರಪಳಿ ತುಂಡಾಗಿ ನದಿ ಒಡಲಿಗೆ ಬಿದ್ದಾಗ ಇಡೀ ತ್ರಿವಳಿ ರಾಜ್ಯಗಳ ಜನತೆ ಬೆಚ್ಚಿಬಿದ್ದಿದ್ದರು. ಆಗ ಹಿರಿಯ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ (ಟಿಬಿಬಿ) ವಾರದಲ್ಲೇ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ಪ್ರವಾಹದ ಭೀತಿ ನೀಗಿಸಿತ್ತು. ಆದರೆ, ಆ ಸಮಾಧಾನ ಬಹಳ ದಿನ ಉಳಿಯಲಿಲ್ಲ. ಗೇಟ್‌ಗಳ ಸಂಪೂರ್ಣ ಬದಲಾವಣೆಯ ನೆಪವೊಡ್ಡಿ, 2025-26ನೇ ಸಾಲಿನ ಬೇಸಿಗೆ ಬೆಳೆಗೆ (ಎರಡನೇ ಬೆಳೆ) ನೀರು ನೀಡುವುದಿಲ್ಲ ಎಂದು ಟಿಬಿಬಿ ಘೋಷಿಸಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗ ಇದರ ಬೆನ್ನಲ್ಲೇ ಜಲಾಶಯದ ಒಡಲಲ್ಲಿ ಹೂಳು ತುಂಬಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಜಲಾಶಯಗಳಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ಸಂಗ್ರಹವಾಗುವುದು ಪ್ರಕೃತಿ ಸಹಜವಾದರೂ, ಕಳೆದ ಕೇವಲ 10 ವರ್ಷಗಳಲ್ಲಿ ಸುಮಾರು ಮೂರು ಟಿಎಂಸಿಯಷ್ಟು ಹೂಳು ತುಂಬಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದರರ್ಥ, ರೈತರು ತಮಗೆ ಸಿಗುತ್ತದೆ ಎಂದು ನಂಬಿರುವ ನೀರಿನಲ್ಲಿ ಸುಮಾರು ಮೂರು ಟಿಎಂಸಿಯಷ್ಟು ನೀರು ಈಗ ಕೇವಲ ಮಣ್ಣಿನ ಪಾಲಾಗಿದೆ. ಸಿಡಬ್ಲ್ಯುಸಿ ತಜ್ಞರ ಪ್ರಕಾರ, ಜಲಾಶಯದ ಇಂದಿನ ನೈಜ ಸಾಮರ್ಥ್ಯ ಕೇವಲ 102 ಟಿಎಂಸಿ ಮಾತ್ರ. ಈ ಕಟು ಸತ್ಯವನ್ನು ಅರಿಯಲು ಟಿಬಿಬಿ ಕೂಡಲೇ ಮರು ಸಮೀಕ್ಷೆ ನಡೆಸಬೇಕಿದೆ. ಅಲ್ಲಿಯವರೆಗೆ ಸುರಕ್ಷತೆಯ ದೃಷ್ಟಿಯಿಂದ ಕೇವಲ 100 ಟಿಎಂಸಿ ಮಾತ್ರ ಲಭ್ಯವಿದೆ ಎಂದು ಮಂಡಳಿ ಪರಿಗಣಿಸಬೇಕಿದೆ ಎಂಬುದು ತಜ್ಞರ ಎಚ್ಚರಿಕೆಯ ನುಡಿಯಾಗಿದೆ.
1972ರಿಂದ ಸಮೀಕ್ಷೆಗಳ ಏರಿತದ ಇತಿಹಾಸ
ತುಂಗಭದ್ರಾ ಜಲಾಶಯದ ಸಾಮರ್ಥ್ಯದ ಇತಿಹಾಸವೇ ಒಂದು ಅಚ್ಚರಿ, 2008ರ ಸಮೀಕ್ಷೆಯಲ್ಲಿ ಸಾಮರ್ಥ್ಯ 100.855 ಟಿಎಂಸಿ ಎಂದು ದಾಖಲಾಗಿತ್ತು. ಆದರೆ 2016ರಲ್ಲಿ ಮೊದಲ ಬಾರಿಗೆ ಏರಿಳಿತದ ವರದಿ ನೀಡಿತ್ತು. ಕಳೆದ 30 ವರ್ಷಗಳಲ್ಲಿ ಎಂಟು ಬಾರಿ ಸಮೀಕ್ಷೆ ನಡೆದಿದ್ದು, 1972ರಲ್ಲಿ ಒಮ್ಮೆ ಇತಿಹಾಸ ಆರು ಟಿಎಂಸಿ ಏರಿಕೆ ಕಂಡಿದ್ದನ್ನು ಹೊರತುಪಡಿಸಿದರೆ ಉಳಿದೆಲ್ಲಾ ಬಾರಿ ಕುಸಿತವೇ ದಾಖಲಾಗಿದೆ. 2016ರ ಸಮೀಕ್ಷಾ ವರದಿಯ ಆಧಾರದ ಮೇಲೆಯೇ ಈ ವರ್ಷ ರಾಜ್ಯಗಳ ನೀರಿನ ಪಾಲು ಹಂಚಿಕೆಯಾಗಿತ್ತು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಆ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗುವ ಲಕ್ಷಣಗಳಿವೆ.
ಸಂಕಷ್ಟದಲ್ಲಿ ಅಚ್ಚುಕಟ್ಟು ಪ್ರದೇಶ
ಒಂದು ವೇಳೆ ಹೂಳಿನ ಪ್ರಮಾಣ ಅಧಿಕೃತವಾಗಿ ಸಾಬೀತಾದರೆ, ಕರ್ನಾಟಕದ ಪಾಲಿನ 3.23 ಟಿಎಂಸಿ, ಆಂಧ್ರದ 1.5 ಟಿಎಂಸಿ ಹಾಗೂ ತೆಲಂಗಾಣದ 0.15 ಟಿಎಂಸಿ ನೀರಿನ ಹಂಚಿಕೆಯಲ್ಲಿ ಭಾರಿ ವ್ಯತ್ಯಯವಾಗಲಿದೆ. ಈ ಮೊದಲು ನಿಗದಿಯಾಗಿದ್ದ 66.12 (ಕರ್ನಾಟಕ), 31.62 (0) 2 3.09 (5) ಟಿಎಂಸಿ ನೀರು ಇನ್ನು ಮುಂದೆ ಕನಸಾಗುವ ಭೀತಿ ಎದುರಾಗಿದೆ. ಸಂಗ್ರಹ ಸಾಮರ್ಥ್ಯ 102 ಟಿಎಂಸಿಗೆ ಸೀಮಿತಗೊಂಡರೆ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ನೀರು ತಲುಪುವುದು ದುಸ್ತರವಾಗಲಿದೆ.
ಮರು ಸಮೀಕ್ಷೆಗೆ ಟೆಂಡರ್ ಪ್ರಕ್ರಿಯೆ
ಹಿಂದೆ 2016ರಲ್ಲಿ ಹೈದರಾಬಾದ್‌ನ ಆರ್ವಿ ಅಸೋಸಿಯೇಟ್ಸ್ ಮೂಲಕ ಎರಡು ಕೋಟಿ ರೂ. ವೆಚ್ಚದಲ್ಲಿ ಬೃಹತ್ ಸಮೀಕ್ಷೆ ನಡೆಸಲಾಗಿತ್ತು. ಈಗ ಮತ್ತೆ ಜಲಾಶಯದ ಅಳತೆಯನ್ನು ಪರೀಕ್ಷಿಸಲು ಟಿಬಿಬಿ ಸಜ್ಜಾಗಿದ್ದು, ಶೀಪುದಲ್ಲೇ ಟೆಂಡರ್ ಕರೆಯಲಿದೆ. ಈ ಹೊಸ ವರದಿಯು ರೈತರ ಪಾಲಿಗೆ ಹಸಿರು ಸಿರಿಯನ್ನು ತರುತ್ತದೆಯೇ ಅಥವಾ ಬರಸಿಡಿಲಾಗಲಿದೆಯೇ ಎಂದು ಕಾದು ನೋಡಬೇಕಿದೆ.
ತುಂಗಭದ್ರಾ ಜಲಾಶಯದ ನೀರಿನ ಸಾಮರ್ಥ್ಯದ ಸಮೀಕ್ಷೆ 20160 ನಡೆಸಲಾ ಗಿತ್ತು. ಇನ್ನು ಹೂಳು ತುಂಬಿರ ಬಹುದು ಎಂದು ಸಿಡಬ್ಲ್ಯುಸಿ ತಜ್ಞರು ಅನುಮಾನಿಸಿದ್ದಾರೆ. ಆದ್ದರಿಂದ 102 టిఎంసిగో ఇళయువ ಸಾಧ್ಯತೆಯಿದೆ.