ಪ್ರಮುಖ ಮುಖ್ಯಾಂಶಗಳು
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತುಂಗಭದ್ರಾ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಮಹತ್ವದ ಹೆಜ್ಜೆ ಇಡಲಾಗುತ್ತಿದ್ದು,ಜಲಾಶಯದ ಕ್ರಸ್ಟಿಗೇಟ್‌ಗಳ ಜೈನ್ ಹಾಗೂ ಗೇರ್‌ಪಾರ್ಟ್ಸ್ ಗಳ ಬದಲಾವಣೆ ಪ್ರಕ್ರಿಯೆ ಚುರುಕುಗೊಂಡಿದೆ.ಒಟ್ಟು 5.8 ಕೋಟಿ ರೂ. ವೆಚ್ಚದಲ್ಲಿ ಈ ಬಿಡಿಭಾಗಗಳ ಬದಲಾವಣೆಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು,ತಮಿಳುನಾಡಿನ ಚೆನ್ನೈನ ಟಿಐಡಿಸಿ ಕಂಪನಿಯಲ್ಲಿ ಚೈನ್‌ಗಳ ತಯಾರಿಕೆ ಕಾರ್ಯ ಭರದಿಂದ ಸಾಗಿದೆ.
ತುಂಗಭದ್ರಾ ಜಲಾಶಯ ಮಂಡಳಿ (ಟಿಬಿಬಿ) ಈ ಬೃಹತ್ ಕಾಮಗಾರಿಯ ಹೊಣೆಯನ್ನುಗುಜರಾತ್ ಮೂಲದ ಹಾರ್ಡ್ ವೇರ್ ಟೂಲ್ಸ್ ಆ್ಯಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿಗೆ ವಹಿಸಿದೆ. 2025ರಜೂನ್‌ನಿಂದ ಆರಂಭವಾಗಿ ಮುಂದಿನ 15 ತಿಂಗಳ ಕಾಲಮಿತಿಯೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂಬಶರತ್ತು ವಿಧಿಸಲಾಗಿದೆ. ಇದೇ ಕಂಪನಿಯು 33 ಕ್ರಸ್ಟಿಗೇಟ್‌ಗಳ ಬದಲಾವಣೆಯ ಹೊಣೆ ಹೊತ್ತಿದ್ದು, ಈಗ ಅದೇಸಂಸ್ಥೆಗೆ 5.8 ಕೋಟಿ ರೂ. ವೆಚ್ಚದಲ್ಲಿ ಜೈನ್ ಹಾಗೂ ಗೇರ್ ಪಾರ್ಟ್ಸ್ಗಳ ಬದಲಾವಣೆಯ ಟೆಂಡರ್ ನೀಡಲಾಗಿದೆ.
4-5 ವಾರಗಳಲ್ಲೇ ಅಳವಡಿಕೆ ಆರಂಭಕೇಂದ್ರೀಯ ನೀರಾವರಿ ಸಮಿತಿಯ ತಾಂತ್ರಿಕ ಸಲಹೆಯಂತೆ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆವಹಿಸಲಾಗಿದೆ. 19ನೇ ಕ್ರಪ್ಪೆಗೇಟ್‌ನ ಒಂದು ಕಡೆಯ ಜೈನ್ ಅಂದು ಹರಿದಿದ್ದರಿಂದ ಅದಕ್ಕೆ ಈಗಾಗಲೇ ಹೊಸಚೈನ್ ಅಳವಡಿಸಲಾಗಿದೆ. ಉಳಿದ 65 ಚೈನ್‌ಗಳನ್ನು ಈಗ ಬದಲಾಯಿಸಲಾಗುತ್ತಿದೆ. ಹೊಸ ಚೈನ್‌ಗಳು ಬರುವವರೆಗೆಈಗಿರುವ ಜೈನ್‌ಗಳ ಮೂಲಕವೇ ಗೇಟ್ ಗಳ ನಿರ್ವಹಣೆ ಮಾಡಲಾಗುತ್ತದೆ. ಮೂಲಗಳ ಪ್ರಕಾರ, ಮುಂದಿನ ನಾಲೈದುವಾರಗಳಲ್ಲಿ ಚೆನ್ನೈನಿಂದ ಹೊಸ ಚೈನ್‌ಗಳು ಬರಲಿದ್ದು, ತಕ್ಷಣವೇ ಗೇರ್ ಪಾರ್ಟ್ಸ್ಗಳ ಜೊತೆಗೆ ಜೈನ್ಅಳವಡಿಕೆ ಕಾರ್ಯ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಜಲಾಶಯದಲ್ಲಿ ಪ್ರತಿ ಗೇಟ್‌ಗೆ ತಲಾ ಎರಡರಂತೆ ಒಟ್ಟು 66 ಜೈನ್‌ಗಳಅವಶ್ಯಕತೆಯಿದೆ. ಈ ಪೈಕಿ ಪ್ರತಿ ಜೈನ್ ಸುಮಾರು 14 ಮೀಟರ್ ಉದ್ದವಿರಲಿದ್ದು, ಎರಡು ಟನ್ ಭಾರವಿರಲಿದೆ.ಅಂದರೆ ಒಂದು ಗೇಟ್‌ಗೆ ಅಳವಡಿಸುವ ಎರಡು ಚೈನ್‌ಗಳ ಒಟ್ಟು ತೂಕವೇ ನಾಲ್ಕು ಟನ್ ಆಗಿರಲಿದೆ. ಸದ್ಯ ಈಬೃಹತ್ ಟೈನ್ ಗಳು ಹಾಗೂ ಗೇರ್ ಪಾರ್ಟ್ಸ್ಗಳು ಚೆನ್ನೈನಲ್ಲಿ ತಯಾರಾಗುತ್ತಿವೆ.
ತುಂಗಭದ್ರಾ ಜಲಾಶಯದಲ್ಲಿ 33 ಕ್ರಸ್ಟ್‌ಗೇಟ್‌ಗಳ ಪೈಕಿ ಇಲ್ಲಿವರೆಗೆ28 ಹೊಸ ಗೇಟ್‌ಗಳ ತಯಾರಿಕೆ ಆಗಿವೆ. ಇನ್ನು ಎರಡು ಗೇಟ್‌ಗಳು ಪ್ರಗತಿಯಲ್ಲಿವೆ. ಮೂರು ಗೇಟ್‌ಗಳ ತಯಾರಿಬಾಕಿ ಇದೆ. 28 ಹಳೆಯ ಗೇಟ್‌ಗಳ ತೆರವು ಕಾರ್ಯ ಪೂರ್ಣ ಆಗಿದ್ದು, ಒಂದು ಗೇಟ್ ತೆರವು ಪ್ರಗತಿಯಲ್ಲಿದೆ.13, 14, 15, 23ನೇ ಕ್ರಸ್ಟ್‌ಗೇಟ್‌ಗಳ ತೆರವು ಬಾಕಿ ಇದೆ. ಇನ್ನು 19 ಕ್ರಸ್ಟಿಗೇಟ್‌ಗಳು ಅಳವಡಿಕೆಕಾರ್ಯ ಪೂರ್ಣಗೊಂಡಿದೆ. ಐದು ಗೇಟ್‌ಗಳ ಅಳವಡಿಕೆ ಪ್ರಗತಿಯಲ್ಲಿದೆ. 18 ಮತ್ತು 19ನೇ ಕ್ರಸ್ಟ್‌ಗೇಟ್ಗಳನ್ನು ಅಳವಡಿಸಿ ಪ್ರಯೋಗ ಕೂಡ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2024ರ ಅ.10ರಂದು ಜಲಾಶಯದ 19ನೇ ಕ್ರಸ್ಟ್‌ಗೇಟ್ ಜೈನ್ ತುಂಡಾಗಿಅನಾಹುತ ಸಂಭವಿಸಿತ್ತು. ಘಟನೆ ನಂತರ ತಜ್ಞರ ತಂಡ ನೀಡಿದ ಸಲಹೆಯಂತೆ ಎಲ್ಲ ಗೇಟ್‌ಗಳನ್ನು ಬದಲಾಯಿಸಲುನಿರ್ಧರಿಸಲಾಗಿದೆ. ಮೊದಲು ದುರಂತ ಸಂಭವಿಸಿದ 19ನೇ ಕ್ರಸ್ಟಿಗೇಟ್ ಜಾಗಕ್ಕೆ ಅಳವಡಿಸಲಾಗಿದ್ದ ಸ್ಟಾಪ್‌ಲಾಗ್ಗೇಟ್‌ಗಳನ್ನು ತೆರವುಗೊಳಿಸಿ ಹೊಸ ಗೇಟ್ ಅಳವಡಿಕೆಗೆ 1.98 ಕೋಟಿ ರೂ. ವೆಚ್ಚದ ಟೆಂಡರ್ ನೀಡಲಾಗಿತ್ತು.ನಂತರ ಉಳಿದ 32 ಗೇಟ್‌ಗಳ ಬದಲಾವಣೆಗಾಗಿ 52 ಕೋಟಿ ರೂ.ಗಳ ಬೃಹತ್ ಟೆಂಡರ್ ನೀಡಲಾಗಿದೆ. ಇದರೊಂದಿಗೆಕಳೆದ ತಿಂಗಳು 5.8 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಜೈನ್ ಮತ್ತು ಗೇರ್ ಪಾರ್ಟ್ಸ್ಗಳ ಬದಲಾವಣೆಗೆ ಟೆಂಡರ್ನೀಡಲಾಗಿದ್ದು, ಒಟ್ಟಾರೆಯಾಗಿ 59.78 ಕೋಟಿ ರೂ. ವೆಚ್ಚದಲ್ಲಿ ಜಲಾಶಯದ ಗೇಟ್‌ಗಳ ಬದಲಾವಣೆ ಕಾಮಗಾರಿನಡೆದಂತಾಗಿದೆ.
ಗೇಟ್‌ಗಳ ಅಳವಡಿಕೆ ಪ್ರಗತಿಯಲ್ಲಿದೆ. ತಜ್ಞರ ಸಲಹೆ ಹಾಗೂ ಸಿಡಬ್ಲ್ಯುಸಿ ಆದೇಶದಂತೆ ಹೊಸ ಜೈನ್‌ಗಳ ಅಳವಡಿಕೆ ಆಗಲಿದೆ. ಎಲ್ಲ ಜೈನ್‌ಗಳು ಚೆನ್ನೈನಲ್ಲಿ ತಯಾರು ಆಗುತ್ತಿವೆ. ಒಂದು ತಿಂಗಳ ನಂತರ ಚೈನ್ ಬರಲಿದೆ.