ಮರಿಯಮ್ಮನಹಳ್ಳಿ ಪ.ಪಂ. ಕಂದಾಯ ನಿರೀಕ್ಷಕ ರಾಮಪ್ಪಗೆ ಮರಿಯಮ್ಮನಹಳ್ಳಿ ತಾಂಡಾದ ಶ್ರೀ ಸೇವಾಲಾಲ್ ಮಹಾರಾಜ್ ಯುವಕರ ಸಂಘದಿಂದ ಮನವಿ ಸಲ್ಲಿಸಲಾಯಿತು.  
ವಿಜಯನಗರ

ಬೀದಿ ದೀಪಗಳ ಅಳವಡಿಕೆಗೆ ಕ್ರಮವಹಿಸಿ

ಅಶೋಕ್ ಕುಮಾರ್ ಎನ್
ಮರಿಯಮ್ಮನಹಳ್ಳಿ: ಬೀದಿ ದೀಪ ಅಳವಡಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮರಿಯಮ್ಮನಹಳ್ಳಿ ತಾಂಡಾದ ಶ್ರೀ ಸೇವಾಲಾಲ್ ಮಹಾರಾಜ್ ಯುವಕರ ಸಂಘದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ಪಟ್ಟಣದಿಂದ ತಾಂಡಕ್ಕೆ ತೆರಳುವ ಮಾರ್ಗದ ಬದಿ ಬೀದಿ ದೀಪಗಳು ಬೆಳಗದೆ ಸುಮಾರು ಒಂದು ವರ್ಷ ಕಳೆದಿದೆ. ಪಟ್ಟಣ ಪಂಚಾಯಿತಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಲಾಗಿದ್ದರೂ ಕ್ರಮವಹಿಸಿಲ್ಲ. ತಾಂಡದಲ್ಲಿನ ಆಂಜನೇಯಸ್ವಾಮಿ ದೇಗುಲ ಬಳಿಯ ಹೈಮಾಸ್ಟ್ ದೀಪ ಕೂಡ ಬೆಳಗುತ್ತಿಲ್ಲ. ನೀರಿನ ಟ್ಯಾಂಕ್ ಸ್ವಚ್ಛಗೊಳಿಸದೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ದೂರಿದರು.
ತಾಂಡಾದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಫಾರ್ಮ್ 3 ನೀಡಲು ವಿಳಂಬ ಮಾಡಲಾಗುತ್ತಿದೆ. ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕು ಎಂದು ಒತ್ತಾಯಿಸಿದರು.