ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ನಿಯಂತ್ರಣ ಹಾಕಬೇಕು ಎಂದು ಒತ್ತಾಯಿಸಿ ಹಗರಿಬೊಮ್ಮನಹಳ್ಳಿಯಲ್ಲಿ ಉಪ ತಹಸೀಲ್ದಾರ್ ಶಿಲ್ಪಾ ಮೇಟಿಗೆ ಔಷಧ ಮಾರಾಟಗಾರರ ಸಂಘದಿಂದ ಮನವಿ ಸಲ್ಲಿಸಲಾಯಿತು. 
ವಿಜಯನಗರ

ಕೂಡಲೆ ನಿಯಂತ್ರಣ ಹಾಕಿ

ಅಶೋಕ್ ಕುಮಾರ್ ಎನ್
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಎಲ್ಲ ಔಷಧ ಅಂಗಡಿಗಳನ್ನು ಬಂದ್ ಮಾಡಿ ವ್ಯಾಪಾರಿಗಳು ಬಸವೇಶ್ವರ ಬಜಾರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಈಶ್ವರ ದೇಗುಲದಿಂದ ಬಸವೇಶ್ವರ ವೃತ್ತದವರೆಗೆ ಮೌನ ಮೆರವಣಿಗೆ ನಡೆಸಿ ಆನ್‌ಲೈನ್‌ನಲ್ಲಿ ಔಷಧ ಮಾರಾಟ ಸ್ಥಗಿತಗೊಳಿಸುವಂತೆ ಉಪ ತಹಸೀಲ್ದಾರ್ ಶಿಲ್ಪಾ ಮೇಟಿಗೆ ಮನವಿ ಸಲ್ಲಿಸಿದರು.
ಔಷಧ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ರೆಡ್ಡಿ ಮಾತನಾಡಿ, ವೈದ್ಯರ ಸಲಹೆಯಿಲ್ಲದೆ ಆನ್‌ಲೈನ್‌ನಲ್ಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಸಾರ್ವಜನಿಕರಿಗೆ ಮೋಸವನ್ನೂ ಮಾಡಲಾಗುತ್ತಿದೆ. ಆದ್ದರಿಂದ ಆನ್‌ಲೈನ್ ಮಾರಾಟಕ್ಕೆ ಕೂಡಲೆ ನಿಯಂತ್ರಣ ಹಾಕುವ ಅವಶ್ಯ ಇದೆ ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ವಾಹಿದ್, ಚಂದ್ರಶೇಖರ್ ರೆಡ್ಡಿ, ಆನಂದ್ ರೆಡ್ಡಿ, ಪ್ರವೀಣ್ ಕಡ್ಲಿ, ದಯಾನಂದ್, ಅನೂಪ್ ಚಿದ್ರಿ, ವೆಂಕಟೇಶ್, ಚಂದ್ರಶೇಖರ್ ರೆಡ್ಡಿ, ಸುಜನ್ ಮಾಲ್ವಿ, ಶಶಿಧರ್, ಬಸವರಾಜ್ ಇತರರಿದ್ದರು.