ಹಗರಿಬೊಮ್ಮನಹಳ್ಳಿಯಿಂದ ಕೊಟ್ಟೂರು ಮಾರ್ಗದಲ್ಲಿ ಪಾದಯಾತ್ರಿಗಳು ಎಸೆದಿದ್ದ ತ್ಯಾಜ್ಯವನ್ನು ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ, ಪೌರಕಾರ್ಮಿಕರು ತೆರವುಗೊಳಿಸಿದರು.  
ವಿಜಯನಗರ

ಸ್ವಾಮೀಜಿಯಿಂದ ಸ್ವಚ್ಛತೆಯ ಜಾಗೃತಿ

ಹಗರಿಬೊಮ್ಮನಹಳ್ಳಿ: ಕೊಟ್ಟೂರು ರಸ್ತೆಯುದ್ದಕ್ಕೂ ಪಾದಯಾತ್ರಿಗಳಿಗೆ ಉಪಹಾರ, ಕುಡಿಯುವ ನೀರು ನೀಡಲಾಯಿತು. ಈ ಕುರಿತ ಕಸ ರಸ್ತೆ ಬದಿಯಲ್ಲೇ ಎಸೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಭಕ್ತರು ಮತ್ತು ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡರು. ಕಸವನ್ನು ರಸ್ತೆ ಬದಿ ಎಸೆಯುವುದರಿಂದ ಪರಿಸರ ಹಾಳಾಗುತ್ತದೆ. ಜಾನುವಾರುಗಳು ತಿನ್ನುವುದರಿಂದ ಆಹಾರದೊಂದಿಗೆ ಪ್ಲಾಸ್ಟಿಕ್ ಕೂಡ ಅವುಗಳ ಹೊಟ್ಟೆ ಸೇರುತ್ತದೆ. ಆದ್ದರಿಂದ ಕಸ ಎಸೆಯುವಾಗ ಆಲೋಚಿಸಿ ಮತ್ತು ಪ್ಲಾಸ್ಟಿಕ್ ಬಳಸಬೇಡಿ ಎಂದರು.
ಎಪಿಎಂಸಿಯಿಂದ ವರಲಹಳ್ಳಿಯವರೆಗೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಎಚ್.ಎಂ.ಗುರುಬಸವರಾಜ, ಶ್ರೀಶೈಲಪ್ಪ, ಪುರಸಭೆಯ ಆರೋಗ್ಯ ಅಧಿಕಾರಿ ವಿಜಯಲಕ್ಷ್ಮೀ, ಮೇಸ್ತ್ರಿ ಈರಣ್ಣ ಮತ್ತಿತರರು ಇದ್ದರು.