ಸಿರಗುಪ್ಪದಲ್ಲಿ ಉಪ ತಹಸೀಲ್ದಾರ್ ಮಂಜುನಾಥ ಅಧ್ಯಕ್ಷತೆಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಪೂರ್ವಭಾವಿ ಸಭೆ ನಡೆಯಿತು. ತೆಕ್ಕಲಕೋಟೆ ಉಪ ತಹಸೀಲ್ದಾರ್ ಯಾಕೂಬ್ ಅಲಿ, ಭೋವಿ ಸಂಘದ ತಾಲೂಕು ಅಧ್ಯಕ್ಷ ಗಾಳೆಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಡ್ಡೇರು ಸಿದ್ದಯ್ಯ ಇತರರಿದ್ದರು.
- ಉಪ ತಹಸಿಲ್ದಾರ್ ಮಂಜುನಾಥ ಮನವಿ
- ಸಿರಗುಪ್ಪ ಪೂರ್ವಭಾವಿ ಸಭೆ
ಸಿರಗುಪ್ಪ: ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಜ.14ರಂದು ಆಚರಿಸಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಎಲ್ಲ ಅಧಿಕಾರಿಗಳು , ಸಿಬ್ಬಂದಿ ಹಾಗೂ ಸಮುದಾಯದವರು ಕೈಜೋಡಿಸಬೇಕೆಂದು ಉಪ ತಹಸೀಲ್ದಾರ್ ಮಂಜುನಾಥ ಕೋರಿದರು.
ಪಟ್ಟಣದ ಸಿಡಿಪಿಒ ಕಚೇರಿ ಸಭಾಂಗಣದಲ್ಲಿ ತಾಲೂಕಾಡಳಿತ, ಪ್ರಗತಿಪರ ಸಂಘಟನೆಗಳು ಹಾಗೂ ತಾಲೂಕು ಭೋವಿ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ನೇತಾಜಿ ವ್ಯಾಯಾಮ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುವುದು. ಸಂಪನ್ಮೂಲ ವ್ಯಕ್ತಿಯಿಂದ ಉಪನ್ಯಾಸ ಹಾಗೂ ತಾಲೂಕು ಮೈದಾನದಿಂದ ನೇತಾಜಿ ವ್ಯಾಯಾಮ ಶಾಲೆವರೆಗೆ ಸಿದ್ಧರಾಮೇಶ್ವರ ಭಾವಚಿತ್ರ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.
ತೆಕ್ಕಲಕೋಟೆ ಉಪ ತಹಸೀಲ್ದಾರ್ ಯಾಕೂಬ್ ಅಲಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಡ್ಡೇರು ಸಿದ್ದಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ವರ್ಮ, ಭೋವಿ ಸಂಘದ ತಾಲೂಕು ಅಧ್ಯಕ್ಷ ಗಾಳೆಪ್ಪ, ಛಲವಾದಿ ಮಹಾಸಭಾ ಗೌರವಾಧ್ಯಕ್ಷ ಸಣ್ಣ ರಾಮಯ್ಯ, ಪ್ರಮುಖರಾದ ಹುಲುಗಪ್ಪ, ನಟರಾಜ, ಮುದುಕಪ್ಪ, ಮಂಜುನಾಥ, ತಿಮ್ಮಯ್ಯ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.