ಕೊಟ್ಟೂರಿನಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಅಲಾಯಿ ಕುಣಿಯಲ್ಲಿ ಅಗ್ನಿ ಸ್ಪರ್ಶಿಸಲಯಿತು. ದರ್ಗಾ ಸಮಿತಿ ಪ್ರಮುಖರಾದ ಪಾನ ಕೃಷ್ಣಪ್ಪ, ಗಾದೆವರ ಕೊಟ್ರೇಶಪ್ಪ, ಫಕೀರಪ್ಪ, ಸೆರಗಾರ ವೆಂಕಟೇಶ ಇತರರಿದ್ದರು. 
ವಿಜಯನಗರ

ಸಕ್ಕರೆ-ಬೆಲ್ಲ ಸಮರ್ಪಣೆ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಭಾವೈಕ್ಯದ ಪ್ರತೀಕವಾದ ಮೊಹರಂ
  • ಕೊಟ್ಟೂರು ಮೊಹರಂ ಸಂಭ್ರಮ
ಕೊಟ್ಟೂರು: ಹಿಂದೂ ಮುಸ್ಲಿಮರ ಭಾವೈಕ್ಯದ ಪ್ರತೀಕವಾದ ಮೊಹರಂ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಉಜ್ಜಿನಿ ಸರ್ಕಲ್ ನಲ್ಲಿರುವ ಫಕೀರ ಸ್ವಾಮಿ ದೇವಸ್ಥಾನ ಮುಂಭಾಗ ಗುರುವಾರ ಸಂಜೆ ಅಗ್ನಿ ಕುಂಡಕ್ಕೆ ಅಗ್ನಿ ಸ್ಪರ್ಶಿಸಿ ಹಬ್ಬದ ಸಂಭ್ರಮೋತ್ಸವಕ್ಕೆ ಚಾಲನೆ ನೀಡಲಾಯಿತು. ಅಗ್ನಿ ಕುಣಿಗೆ ಚಾಲನೆ ದೊರೆಯುತ್ತಿದ್ದಂತೆ ಹಿಂದೂ, ಮುಸ್ಲಿಂ ಎನ್ನದೆ ಸರ್ವರು ಶ್ರದ್ಧಾಭಕ್ತಿಯಿಂದ ಸರತಿ ಸಾಲಿನಲ್ಲಿ ನಿಂತು ಫಕೀರ ಸ್ವಾಮಿಗೆ ಸಕ್ಕರೆ, ಬೆಲ್ಲ ಸಮರ್ಪಿಸಿ ಭಕ್ತಿ ಸಲ್ಲಿಸಿದರು.
ಅಗ್ನಿಕುಂಡಕ್ಕೆ ಅಗ್ನಿ ಸ್ಪರ್ಶದ ವೇಳೆ ದರ್ಗಾ ಸಮಿತಿ ಪ್ರಮುಖರಾದ ಪಾನ ಕೃಷ್ಣಪ್ಪ, ಗಾದೆವರ ಕೊಟ್ರೇಶಪ್ಪ, ಫಕೀರಪ್ಪ, ಸೆರಗಾರ ವೆಂಕಟೇಶ ಇತರರಿದ್ದರು.