ಹೊಸಪೇಟೆಯಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಎಸ್ಪಿ ಎಸ್.ಜಾಹ್ನವಿ ಮಾತನಾಡಿದರು. ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ್, ಸುಬ್ರಮಣ್ಯಂ, ಪ್ರಶಾಂತ್ ನಾಗಲಾಪುರ, ಎಎಸ್ಪಿ ಮಂಜುನಾಥ, ಡಿವೈಎಸ್ಪಿ ಟಿ.ಮಂಜುನಾಥ ಇತರರಿದ್ದರು. 
ವಿಜಯನಗರ

ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಮ್ಯಾರಥಾನ್ ಗೆ ಚಾಲನೆ ನೀಡಿ ಎಸ್ಪಿ ಜಾಹ್ನವಿ ಕರೆ
ಹೊಸಪೇಟೆ: ಅಪರಾಧ ತಡೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಥಾ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಪಿ ಎಸ್.ಜಾಹ್ನವಿ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’, ‘ಎಲ್ಲರಿಗಾಗಿ ಫಿಟ್ ನೆಸ್’ ಮತ್ತು ‘ಮಾದಕ ದ್ರವ್ಯ ಮುಕ್ತ ಕರ್ನಾಟಕ’ ಧ್ಯೇಯ ವಾಕ್ಯದೊಂದಿಗೆ ಭಾನುವಾರ ನಗರದಲ್ಲಿ ಮ್ಯಾರಥಾನ್‌ಗೆ ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮನಸ್ಸು ಮತ್ತು ಶರೀರ ಆರೋಗ್ಯವಾಗಿದ್ದರೆ ಮಾತ್ರ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯ. 8 ವಯಸ್ಸಿನಿಂದ 80ರ ವಯಸ್ಸಿನ ತನಕವೂ ಫಿಟ್‌ನೆಸ್ ಮತ್ತು ಉತ್ತಮ ಆರೋಗ್ಯ ಅವಶ್ಯಕ. ಮನೆಯ ಜವಾಬ್ದಾರಿ, ಉದ್ಯೋಗದ ಒತ್ತಡದ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಎಂದು ಕಿವಿಮಾತು ಹೇಳಿದರು.
5 ಕಿ.ಮೀ ಹಾಗೂ 10 ಕಿಮೀ ಓಟದ ಸ್ಪರ್ಧೆಯು ಟಿಬಿಡ್ಯಾಂನಿAದ ನಗರದ ಜಿಲ್ಲಾಧಿಕಾರಿ ಕಚೇರಿ, ಸಾಯಿಬಾಬ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದ ವರೆಗೆ ನಡೆದ ಮ್ಯಾರಾಥಾನ್‌ನಲ್ಲಿ ಮುಂಜಾನೆಯೇ ಪೊಲೀಸ್ ಅಧಿಕಾರಿಗಳು-ಸಿಬ್ಬಂದಿ ಜತೆ, ಹಿರಿಯ ನಾಗರಿಕರು, ಯುವಕ-ಯುವತಿಯರು ಮ್ಯಾರಥಾನ್ ನಲ್ಲಿ ಹೆಜ್ಜೆ ಹಾಕಿದರು.
ಐದು ಕಿಮೀ ಓಟದಲ್ಲಿ ಪುರುಷರಲ್ಲಿ ತಿಪ್ಪೇಶ ಯಾದವ್, ಮಹಿಳೆಯರಲ್ಲಿ ಸುವರ್ಣ ಮೊದಲ ಸ್ಥಾನ ಪಡೆದರೆ, ಎರಡನೇ ಸ್ಥಾನಕ್ಕೆ ಬಸವರಾಜ್ ಹಿರೇಮಠ, ಕೆ.ಕವಿತಾ, ಮೂರನೇ ಸ್ಥಾನಕ್ಕೆ ಚೇತನ್ ಹಾಗೂ ಟಿ.ಬಿ.ಗೋಪಿಕಾ ಸ್ಥಾನ ಪಡೆದರು. ಪ್ರಥಮ ಸ್ಥಾನ ಪಡೆದವರಿಗೆ 10 ಸಾವಿರ, ಎರಡನೇ ಸ್ಥಾನ ಪಡೆದವರಿಗೆ 5 ಸಾವಿರ, ಮೂರನೇ ಸ್ಥಾನ ಪಡೆದವರಿಗೆ 3 ಸಾವಿರ ಬಹುಮಾನ ನೀಡಿ ಪ್ರಮಾಣ ಪತ್ರ ನೀಡಲಾಯಿತು. ಅದೇ ರೀತಿ 10 ಕಿಮೀ ಓಟವನ್ನ ಟಿಬಿಡ್ಯಾಂ ವೈಕುಂಠ ಅಥಿತಿ ಗೃಹದಿಂದ ಆರಂಭಿಸಿ ಪುನೀತ್'ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಿತು. ಇದರಲ್ಲಿ ಚಂದ್ರಶೇಖರ ಬಸವರಾಜ್ ಹಾಗೂ ಉಷಾ ರೋಹಿಣಿ ಮೊದಲ ಸ್ಥಾನ ಪಡೆದರು. ಗೋವಿಂದ ರಾಜ್ ಹಾಗೂ ಸೌಮ್ಯ ಎರಡನೇ ಸ್ಥಾನ ಪಡೆದರು. ಜಿ.ವಿನಯ್ ಹಾಗೂ ಗೋಪಿಕಾ ಮೂರನೇ ಸ್ಥಾನ ಪಡೆದು, ಕ್ರಮೇಣವಾಗಿ 10 ಸಾವಿರ, 5 ಸಾವಿರ ಹಾಗೂ 3 ಸಾವಿರ ರೂ. ನಗದು ಮತ್ತು ಪ್ರಮಾಣ ಪತ್ರ ನೀಡಲಾಯಿತು.