ಹೊಸಪೇಟೆ ಚಿತ್ತವಾಡ್ಗಿಯಲ್ಲಿ ಮಹಾ ಶಿವರಾತ್ರಿ ನಿಮಿತ್ತ ಸೋಮವಾರ ಬೆಳಗ್ಗೆ ಶ್ರೀ ಸದ್ಗುರು ಶ್ರೀ ಎಣ್ಣೇರಂಗ ಬಸವೇಶ್ವರ ದೇಗುಲದ ಶ್ರೀ ಯನ್ನಪ್ಪ ತಾತ ನವರ ರಥೋತ್ಸವ ಜರುಗಿತು.
- ಆಂದ್ರಪ್ರದೇಶ ಸೇರಿದಂತೆ ನೆರೆ ಜಿಲ್ಲೆಗಳಿಂದ ಸಾವಿರಾರು ಭಕ್ತರು ಭಾಗಿ
ಹೊಸಪೇಟೆ: ಮಹಾ ಶಿವರಾತ್ರಿ ನಿಮಿತ್ತ ನಗರದ ಚಿತ್ತವಾಡ್ಗಿ ವರಕೇರಿ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಶ್ರೀ ಸದ್ಗುರು ಶ್ರೀ ಎಣ್ಣೇರಂಗ ಬಸವೇಶ್ವರ ದೇಗುಲದ ಶ್ರೀ ಯನ್ನಪ್ಪ ತಾತ ನವರ ರಥೋತ್ಸವ ಜರುಗಿತು.
ರಥೋತ್ಸವ ದೇಗುಲದಿಂದ ರಥ ಬೀದಿಯ ಬಸವಣ್ಣ ದೇಗುಲದ ವರೆಗೆ ಸಾಗಿತು. ಮಹಾ ಶಿವರಾತ್ರಿ ಪ್ರಯುಕ್ತ ಭಾನುವಾರದಿಂದ ಸೋಮವಾರ ಬೆಳಗಿನ ಜಾವದ ವರೆಗೆ ಮಠದ ಆವರಣದಲ್ಲಿ ಶಿವನ ಆರಾಧನೆ, ಭಜನೆ ಕಾರ್ಯಕ್ರಮಗಳು ನಡೆದವು. ಈ ರಥೋತ್ಸವದಲ್ಲಿ ಸ್ಥಳೀಯರು, ಆಂದ್ರಪ್ರದೇಶ ಅನಂತಪುರ ಸೇರಿದಂತೆ ನೆರೆ ಜಿಲ್ಲೆಗಳಿಂದ ಸಾವಿರಾರು ಭಕ್ತರು ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡಿದ್ದರು,
ದೇಗುಲದಲ್ಲಿ ಶಿವರಾತ್ರಿ ನಿಮಿತ್ತ ಮಹಿಳೆಯರಿಗೆ ಹುಡಿ ತುಂಬುವ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆ ನಡೆದವು. ರಾತ್ರಿ ಶಿವ ಧ್ಯಾನ ಜಾಗರಣೆ, ಭಜನ, ವಿಶೇಷ ಪೂಜೆಗಳನ್ನು ನೇರವೇರಿದವು. ರಾಜ್ಯದ ದೇಶದ ಎಲ್ಲಾ ಜನರಿಗೆ ಒಳಿತಾಗಲಿ ಉತ್ತಮವಾದ ಮಳೆ ಬೆಳೆ ಬರಲೆಂದು ಪ್ರಾರ್ಥನೆ ಎಂದು ಸಲ್ಲಿಸಲಾಯಿತು.
ದೇಗುಲದ ಆಡಳಿತ ಮಂಡಳಿ ಪ್ರಮುಖರಾದ ಎಂ.ಬಸವರಾಜ, ಡಿ.ಈಶ್ವರಪ್ಪ, ನಿಂಬಗಲ್ ರಾಮಕೃಷ್ಣ, ದಾನಪ್ಪ, ಹನುಮಂತ, ಫಕ್ಕೀರಪ್ಪ, ಪಾಂಡುರAಗ, ಕೆ.ಇಮ್ತಿಯಾಜ್, ನಿಂಬಗಲ್ ರಘು, ನಿಂಬಗಲ್ ನಾಗರಾಜ್, ಹೋನ್ನೂರ, ಹುಲುಗಪ್ಪ, ಗೀರಿಶ, ಸುರೇಶ್, ಗಂಗಾಧರ, ಪಂಪಣ್ಣ, ಆನಂದ, ರವಿ, ನಾಗರಾಜ, ಗೋವಿಂದ, ಬಿ.ರಂಗಮ್ಮ, ರಫೀಕ್ ಇತರರಿದ್ದರು.