ಹೊಸಪೇಟೆಯಲ್ಲಿ ಃಂಟಿuvAಡಿ ವಾಸವಿ ದೇವಿಯ ವಿಗ್ರಹದೊಂದಿಗೆ ಪೂರ್ಣಕುಂಬ ಕಳಸ ಸಂಕೀರ್ತನ ಯಾತ್ರೆ ನಡೆಯಿತು. 
ವಿಜಯನಗರ

ಶ್ರೀ ವಾಸವಿ ಜಯಂತಿ ಸಂಭ್ರಮ

ಮಂಜುನಾಥ
ಹೊಸಪೇಟೆ: ನಗರದಲ್ಲಿ ಆರ್ಯವೈಶ್ಯ ಸಂಘದಿAದ ಭಾನುವಾರ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಿಯ ಜಯಂತೋತ್ಸವ ವಿಜೃಂಭಣೆಯಿAದ ಆಚರಿಸಲಾಯಿತು.
ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ದೇವಿಯ ಜಯಂತೋತ್ಸವ ನಿಮಿತ್ತ ವಾಸವಿ ದೇವಿಯ ವಿಗ್ರಹದೊಂದಿಗೆ ಇಲ್ಲಿನ ಮೆನ್ ಬಜಾರ್ ಶ್ರೀ ನಗರೇಶ್ವರ ದೇಗುಲದಿಂದ ಗಾಂಧಿ ವೃತ್ತ, ಪುಣ್ಯಮೂರ್ತಿ ಸರ್ಕಲ್, ಹಂಪಿ ರಸ್ತೆ ಮಾರ್ಗವಾಗಿ ಶ್ರೀ ವಾಸವಿ ದೇಗುಲದ ವರಗೆ ಪೂರ್ಣಕುಂಬ ಕಳಸ ಸಂಕೀರ್ತನ ಯಾತ್ರೆಯನ್ನು ನಡೆಯಿತು.
ಶ್ರೀ ವಾಸವಿ ದೇಗುಲಕ್ಕೆ ಕಳಸ ಪೂಜೆ, ದೇವಿಗೆ ತೊಟ್ಟಿಲೋತ್ಸವ, ಮಡಿಲಕ್ಕಿ ಸಮರ್ಪಣೆ, ತುಲಬಾರ ಸೇವೆ, ಕನ್ನಿಕೆಯರ ಪೂಜೆ, ವಾಸವಿ ಮಹಿಳಾ ಮಂಡಳಿಯವರಿAದ ಶ್ರೀವಾಸವಿ ಮೂಲಮಂತ್ರ ಪಠಣ, ಶ್ರೀವಾಸವಿ ಭಜನಾ ಮಂಡಳಿಯವರಿAದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆದವು.
ಅದಕ್ಕೂ ಮುನ್ನ ನಗರದ ಹಂಪಿ ರಸ್ತೆಯಲ್ಲಿ£ ಶ್ರೀವಾಸವಿ ವೃತ್ತವನ್ನು ನಿರ್ಮಾಣ ಮಾಡಲು ಭೂಮಿ ಪೂಜೆಯನ್ನು ಮಾಡಲಾಯಿತು. ಈ ವೇಳೆ ನಗರಸಭೆ ಸದಸ್ಯ ರಮೇಶ್ ಗುಪ್ತು, ತಾಲೂಕು ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಕಬಾಳ್ ರಾಜೇಂದ್ರ, ಕಾಯದರ್ಶಿ ಭೂಪಾಲ್ ಪ್ರಹ್ಲಾದ್ ಇತರರಿದ್ದರು.