ಕಂಪ್ಲಿ ಸಮೀಪದ ನಂ.10ಮುದ್ದಾಪುರ ಗ್ರಾಮದ ಶ್ರೀಚೌಡೇಶ್ವರಿದೇವಿ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿರುವುದು. 
ವಿಜಯನಗರ

ಶ್ರೀರಾಮಲಿಂಗ ಚೌಡೇಶ್ವರಿ ದೇವಿ ಅಲಂಕಾರ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಅಲಂಕಾರ ಪೂಜೆ
  • ಗಂಗೆಸ್ಥಳ
  • ಮೆರವಣಿಗೆ
ಕಂಪ್ಲಿ: ನಂ.10ಮುದ್ದಾಪುರ ಗ್ರಾಮದ ಶ್ರೀರಾಮಲಿಂಗ ಚೌಡೇಶ್ವರಿ ದೇವಿ ಮಹಾರಥೋತ್ಸವ ನಿಮಿತ್ತ ಶನಿವಾರ ಬನದ ಹುಣ್ಣಿಮೆ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ ರುದ್ರಾಭಿಷೇಕ, ಅಲಂಕಾರ ಪೂಜೆ, ಗಂಗೆಸ್ಥಳ ಮೆರವಣಿಗೆ, ಪುರವಂತರ ನೃತ್ಯ, ಡೊಳ್ಳು ಕುಣಿತ, ಅನ್ನಸಂತರ್ಪಣೆ ನೆರವೇರಿದವು. ಶ್ರೀರಾಮಲಿಂಗ, ಚೌಡೇಶ್ವರಿ ದೇವಿಯನ್ನು ರಜತ ಮುಖವಾಡ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಸಂಜೆ ರಥೋತ್ಸವ, ಪಲ್ಲಕ್ಕಿ ಸೇವೆ ನಡೆಯಿತು.