ಹಂಪಿಯಲ್ಲಿಶನಿವಾರ ಮ್ಯಾಸನಾಯಕಕುಲದೈವಶ್ರೀ ಓಬಳ ದೇವರೊಂದಿಗೆಗAಗಾ ಪೂಜಾಕಾರ್ಯಕ್ರಮ ಆಗಮಿಸಿದ ಜನರು. ಪ್ರಮುಖರಾದ ವಿಶ್ವನಾಥ ಮಾಳಗಿ, ಈರಣ್ಣ ಪೂಜಾರಿ, ಅನಿಲ್ ಕುಮಾರ್ ಮಾಳಗಿ, ಶ್ರೀನಿವಾಸ, ಒಬಳನಾಯಕ, ಶ್ರೀಹರಿನಾಯಕ ಇತರರಿದ್ದರು.
- ಸಾವಿರಾರುಜನರ ಸಮ್ಮುಖದಲ್ಲಿ ನಡೆದಧಾರ್ಮಿಕಕಾರ್ಯಕ್ರಮ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಚಕ್ರತೀರ್ಥ ಬಳಿ ಶನಿವಾರ ಮ್ಯಾಸನಾಯಕಕುಲದೈವಚಿತ್ರದುರ್ಗಜಿಲ್ಲೆಯ ಮೊಳಕಾಲ್ಲೂರು ತಾಲೂಕಿನಚಿಕ್ಕುಂತಿ (ಕಂಪಳದೇವರ ಹಟ್ಟಿ)ಯ ಶ್ರೀ ಓಬಳ ದೇವರಗಂಗಾ ಪೂಜಾಕಾರ್ಯಕ್ರಮ ಸಾವಿರಾರುಜನರ ಸಮ್ಮುಖದಲ್ಲಿ ನಡೆಯಿತು.
ಚಿತ್ರದುರ್ಗಜಿಲ್ಲೆಯ ಮೊಳಕಾಲ್ಲೂರು ತಾಲೂಕಿನಚಿಕ್ಕುಂತಿ (ಕಂಪಳದೇವರ ಹಟ್ಟಿ)ಯಿಂದ ಸಮುದಾಯದಜನರು ಹಂಪಿಯಚಕ್ರತೀರ್ಥತಲುಪಿದರು. ತುಂಗಭದ್ರಾ ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿದರು.ನಂತರ ವಿರೂಪಾಕ್ಷೇಶ್ವರದೇಗುಲದರಥಬೀದಿಯಲ್ಲಿಕರಿ ಕಂಬಳಿ ಗದ್ದುಗೆ ಹಾಕುವ, ಕಾಸು, ಮಣೆವುಅರ್ಪಿಸುವಕಾರ್ಯಕ್ರಮ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಗಂಗಾ ಪೂಜಾಕಾರ್ಯಕ್ರಮಕ್ಕೆ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿದಂತೆಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಬಳ್ಳಾರಿ, ಚಿತ್ರದುರ್ಗಜಿಲ್ಲೆಯ ನಾನಾ ಕಡೆಯಿಂದ ಮ್ಯಾಸನಾಯಕ ಸಮುದಾಯದಜನ ಗುಂಪು ಗುಂಪಾಗಿ ಹಂಪಿಯಕಡೆ ಪ್ರಯಾಣ ಬೆಳೆಸಿದರು.ಕೆಲವರು ಶುಕ್ರವಾರರಾತ್ರಿ ಹಂಪಿಯಲ್ಲಿತAಗಿದ್ದರೆ, ಇನ್ನೂ ಕೆಲವರು ಶನಿವಾರ ಬೆಳಗ್ಗೆ ಬಂದುಧಾರ್ಮಿಕಕಾರ್ಯಕ್ರಮದಲ್ಲಿ ಭಾಗಿಯಾದರು.ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಹರಕೆ ತೀರಿಸಿದರು.