ರಥೋತ್ಸವ ಹಿನ್ನೆಲೆಯಲ್ಲಿ ಉಜ್ಜಿನಿ ಜಗದ್ಗುರು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ತೇರುಗಾಲಿಯನ್ನು ಮಂಗಳವಾರ ತೇರುಗಾಲಿಯನ್ನು ಹೊರ ಹಾಕಲಾಯಿತು.
ಉಜ್ಜಿನಿ: ಗ್ರಾಮದಲ್ಲಿ ಜಗದ್ಗುರು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಏ.21ರಂದು ನಡೆಯಲಿದ್ದು, ಮಂಗಳವಾರ ತೇರುಗಾಲಿಯನ್ನು ಹೊರ ಹಾಕಲಾಯಿತು.
ಬೆಳಗ್ಗೆ 10.30 ಕ್ಕೆ ಸಕಲ ವಾದ್ಯಗಳು, ಭಕ್ತರ ಜಯಘೋಷದೊಂದಿಗೆ ರಥದ ಗಡ್ಡೆಯನ್ನು ತೇರು ಮನೆಯಿಂದ ಎಳೆದು ತಂದು ರಥ ಕಟ್ಟುವ ಸ್ಥಳದಲ್ಲಿ ನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಹಾಗೂ ಒಂಬತ್ತು ಪಾದಗಟ್ಟೆಗಳ ಭಕ್ತರು ಇದ್ದರು. ಏ.21 ರಂದು ಜಗದ್ಗುರು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ಏ.22 ರಂದು ಶಿಖರಕ್ಕೆ ತೈಲಾಭಿಷೇಕ ನೆರವೇರಲಿದೆ.