ಹೊಸಪೇಟೆ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಕೃಷ್ಣಕವಿ ರಂಗೋಪAತ ನಾಗರಾಜರಾಯ ವಿರಚಿತ ಎತ್ನಳ್ಳಿ ಮಲ್ಲಯ್ಯ ಸಂಪಾದಿಸಿರುವ ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ ಗ್ರಂಥ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಲೋಕಾರ್ಪಣೆ ಮಾಡಿದರು. ವಿದ್ವಾನ ಪಾವಗಡ ಪ್ರಕಾಶರಾವ್, ನಿವೃತ್ತ ಪ್ರಾಧ್ಯಾಪಕರಾದ ಡಾ.ಕೆ.ರವೀಂದ್ರನಾಥ, ಪ್ರೊ.ಮೃತ್ಯುಂಜಯ ರುಮಾಲೆ, ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದರಾಮ ಕಲ್ಮಠ ಇತರರಿದ್ದರು.
- ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅಭಿಪ್ರಾಯ
ಮಹಾಭಾರತದ ಶ್ರೀಕೃಷ್ಣ ಸ್ವಾತಂತ್ರ‍್ಯಕ್ಕೆ ಸ್ಫೂರ್ತಿಯಾಗಿದ್ದಾರೆ. ಭಗವದ್ಗೀತೆಯ ಸಾರದಿಂದಲೇ ನಾವು ಸ್ವಾತಂತ್ರ‍್ಯಕ್ಕೆ ಹೋರಾಟಕ್ಕೆ ಅಣಿಯಾಗಿ; ಬ್ರಿಟಿಷ್‌ರನ್ನು ಭಾರತದಿಂದ ತೊಲಗಿಸಿದ್ದೇವೆ ಎಂದು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು.
ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃಷ್ಣಕವಿ ರಂಗೋಪAತ ನಾಗರಾಜರಾಯ ವಿರಚಿತ ಎತ್ನಳ್ಳಿ ಮಲ್ಲಯ್ಯ ಸಂಪಾದಿಸಿರುವ ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಬೋಧನೆಯಾಗಿತ್ತು, ಇದುವೇ ಭಾರತದ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಪ್ರೇರಣೆಯಾಗಿತ್ತು. ಸ್ವಾತಂತ್ರ‍್ಯನAತರ ದೇಶದ ಜನರಿಗೆ ಶ್ರೀರಾಮ ಆದರ್ಶನಾದ ಎಂದರು.
ಕೃಷ್ಣಕವಿ ರಂಗೋಪAತ ನಾಗರಾಜರಾಯರ ಮೇಲೆ ಗದುಗಿನ ಕುಮಾರವ್ಯಾಸರು ಗಾಢವಾದ ಪ್ರಭಾವ ಬೀರಿದ್ದಾರೆ. ಭಾಮಿನಿ ಷಟ್ಪದಿಯಲ್ಲಿ ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ ಗ್ರಂಥವನ್ನು ಹೊರ ತಂದಿದ್ದಾರೆ. ಕವಿ ರೂಪಕ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ದೀಪಕ ಬಳಕೆ ಮಾಡಿಕೊಂಡಿದ್ದಾರೆ. ಇವರ ಮೇಲೆ ಕುಮಾರವ್ಯಾಸರು ಪ್ರಭಾವ ಬೀರಿದರೂ ಬರವಣಿಗೆಯಲ್ಲಿ ಸ್ವಂತಿಕೆ ಇದೆ. ಗೀತ ಗೋವಿಂದ, ಭಗವದ್ಗೀತೆ, ವಿಕ್ರಮ ಪರ್ವತ, ಪಾಂಡವ ಪರ್ವ ಕುರಿತು ವಿವರಿಸಿದ್ದಾರೆ. 108 ಸಂಧಿ, ಐದು ಪರ್ವ, 16000 ಭಾಮಿನಿ ಷಟ್ಪದಿಯಲ್ಲಿ ಶ್ರೀಕೃಷ್ಣ ಲೀಲಾಮೃತ ಮಹಾಕಾವ್ಯಂ ಗ್ರಂಥ ಬರೆದಿದ್ದಾರೆ. ಇದೊಂದು ವಿಶಿಷ್ಟ ಗ್ರಂಥವಾಗಿದೆ ಎಂದರು.
ವಿದ್ವಾನ ಪಾವಗಡ ಪ್ರಕಾಶರಾವ್, ನಿವೃತ್ತ ಪ್ರಾಧ್ಯಾಪಕರಾದ ಡಾ.ಕೆ.ರವೀಂದ್ರನಾಥ, ಪ್ರೊ.ಮೃತ್ಯುಂಜಯ ರುಮಾಲೆ, ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದರಾಮ ಕಲ್ಮಠ, ಡಿಡಿಪಿಯು ನಾಗರಾಜ ಹವಾಲ್ದಾರ್, ಕೊಪ್ಪಳ ಡಿಡಿಪಿಐ ಎಲ್.ಡಿ.ಜೋಶಿ, ಬಿಇಒ ಶೇಖರಪ್ಪ ಹೊರಪೇಟೆ, ಪ್ರಮುಖರಾದ ಅಧ್ಯಕ್ಷ ಗೊಗ್ಗ ಚನ್ನಬಸವರಾಜ, ಕೆ.ದಿವಾಕರ, ಮಧುರಚನ್ನ ಶಾಸ್ತ್ರಿ, ಮಾಣಿಕ್ಯ ಪ್ರಭು ಇತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ವಡಕರಾಯ ದೇವಸ್ಥಾನದಿಂದ ವೆಂಕಟೇಶ್ವರ ಕಲ್ಯಾಣ ಮಂಟಪದ ವರೆಗೆ ಮಹಾಕಾವ್ಯದ ಮಹಾಯಾನ ರೂಪದಲ್ಲಿ ಗ್ರಂಥಕರ್ತರ ಮೆರವಣಿಗೆ ನಡೆಯಿತು. ಅಂಜಲಿ ಭರತನಾಟ್ಯ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಿತು.