ಕಂಪ್ಲಿಯಲ್ಲಿ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದ ಕ್ರೀಡಾಜ್ಯೋತಿಯನ್ನು ತಹಸೀಲ್ದಾರ್ ಜೂಗಲ ಮಂಜುನಾಯಕ ಬೆಳಗಿಸಿದರು. ಪ್ರಮುಖರಾದ ಕೆ.ಶ್ರೀನಿವಾಸರಾವ್, ಕೆ.ಎಸ್.ಚಾಂದ್‌ಬಾಷಾ, ಕೆ.ಎಂ.ಹೇಮಯ್ಯಸ್ವಾಮಿ, ಭಟ್ಟ ಪ್ರಸಾದ್, ಕೆ.ಎಸ್.ಶಾರುಖ್ ಇತರರಿದ್ದರು.
- ತಹಸೀಲ್ದಾರ್ ಜೂಗಲ ಮಂಜುನಾಯಕ ಸಲಹೆ
- ಕಂಪ್ಲಿ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟ
ಕಂಪ್ಲಿ; ಕ್ರೀಡಾಸ್ಫೂರ್ತಿ ಮತ್ತು ಕ್ರೀಡಾಭ್ಯಾಸ ನಿತ್ಯ ಜೀವನದ ಅವಿಭಾಜ್ಯ ಅಂಗವಾದಾಗ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಕಾಲೇಜೊಂದರಲ್ಲಿ ಹಮ್ಮಿಕೊಂಡಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿ, ನಿತ್ಯ ಕ್ರೀಡಾಭ್ಯಾಸದಿಂದ ಉತ್ತಮ ಸಾಧನೆ ತೋರಲು ಸಾಧ್ಯ. ಪಠ್ಯದ ಜತೆಗೆ ಕ್ರೀಡೆಗೆ ಮಹತ್ವ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೆಸಿಬಿ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ಕೆ.ಎಸ್. ಚಾಂದ್‌ಬಾಷಾ ಮಾತನಾಡಿ, ತಾರತಮ್ಯ ಎಸಗದೆ ಪಾರದರ್ಶಕ ನಿರ್ಣಯ ನೀಡುವಲ್ಲಿ ತೀರ್ಪುಗಾರರು ಜಾಗ್ರತೆ ತೋರಬೇಕು ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಡಿ.ಕೆ. ಅಜೀಜ್ ಉಲ್‌ಹಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕೆ.ಎಸ್.ಶಾರುಖ್, ಕೆ.ಎಂ.ಹೇಮಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಭಟ್ಟ ಪ್ರಸಾದ್, ಸಿ.ಆರ್.ಹನುಮಂತ, ಬಿ.ಸಿದ್ದಪ್ಪ, ರಮೇಶ್ ಎನ್.ಶಿವಪುರ, ಪ್ರಾಚಾರ್ಯರಾದ ಮಾರೆಪ್ಪ, ಸಿದ್ದಪ್ಪ ಪರಮೇಶ್ವರ, ಕೆ.ಬಿ.ವೀರೇಶ್, ಟಿ.ಎಂ.ಬಸವರಾಜ, ಜಿ.ಮಹಾಬಲೇಶ್ವರಪ್ಪ, ಬಸವರಾಜ ನಾಯಕ, ಬಸವರಾಜಸ್ವಾಮಿ, ಎಚ್.ಆರ್.ನವೀನ್‌ಕುಮಾರ್, ಸಿ.ಜಡೆಪ್ಪ ಇತರರಿದ್ದರು.